alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳೆಯೊಂದಿಗೆ ಮಾತನಾಡಿದ್ದಕ್ಕೆ ಹಲ್ಲೆ ನಡೆಸಿದ ಗುಂಪು

ಮಂಗಳೂರು: ಕರಾವಳಿ ಭಾಗದಲ್ಲಿ ನೈತಿಕ ಪೊಲೀಸ್ ಗಿರಿ ಅಟ್ಟಹಾಸ ಮತ್ತೆ ಮರುಕಳಿಸಿದೆ. ವ್ಯಕ್ತಿಯೊಬ್ಬ ಅನ್ಯ ಕೋಮಿನ ಮಹಿಳೆಯೊಂದಿಗೆ ಮಾತನಾಡಿದ್ದಕ್ಕಾಗಿ ದುಷ್ಕರ್ಮಿಗಳ ಗುಂಪು ವ್ಯಕ್ತಿ ಮೇಲೆ ಹಲ್ಲೆ ನಡೆಸಿದೆ.

ಬಂಟ್ವಾಳ ತಾಲೂಕಿನ ಫರಂಗಿಪೇಟೆ ರಾಷ್ಟ್ರೀಯ ಹೆದ್ದಾರಿ ಬಳಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ವ್ಯಕ್ತಿ ಸುರೇಶ್ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆಗೊಳಗಾದ ಸುರೇಶ್ ಈ ಸಂಬಂಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಸ್ ನಿಲ್ದಾಣದಲ್ಲಿ ಅನ್ಯ ಕೋಮಿನ ಮಹಿಳೆಯೊಂದಿಗೆ ಮಾತನಾಡುತ್ತಿದ್ದ ವೇಳೆ 8 ಜನರ ಗುಂಪು ಬಂದು ಹಲ್ಲೆ ನಡೆಸಿದೆ ಎಂದು ತಿಳಿಸಿದ್ದಾರೆ. ಮಹಿಳೆ ಸುರೇಶ್ ಅವರಿಗೆ ಪರಿಚಿತರೇ ಆಗಿದ್ದು, ಆಯುರ್ವೇದ ಔಷಧಿಗಾಗಿ ಫರಂಗಿ ಪೇಟೆಗೆ ಬಂದಿದ್ದರು. ಇಬ್ಬರು ಮಾತನಾಡುವುದನ್ನು ಕಂಡ ಸ್ಥಳೀಯರಿಂದ ಫರಂಗಿ ಪೇಟೆಯಿಂದ ಅನ್ಯಕೋಮಿನ ಯುವಕ ತಮ್ಮ ಧರ್ಮದ ಯುವತಿಯನ್ನು ಕಾರಿನಲ್ಲಿ ಕುಳ್ಳಿರಿಸಿ ಕರೆದುಕೊಂಡು ಹೋಗಲು ಯತ್ನಿಸುತ್ತಿದ್ದಾನೆ ಎಂಬ ಗಾಳಿ ಸುದ್ದಿ ಹರಡಿದ ಹಿನ್ನಲೆಯಲ್ಲಿ ಈ ಅವಾಂತರ ನಡೆಯಲು ಕಾರಣವಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹಲ್ಲೆ ನಡೆಸಿದ ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಬಂಧಿತರು ಬಂಟ್ವಾಳದ ಅಮ್ಮೆಮಾರ್ ಗ್ರಾಮದ ನಿವಾಸಿ ಮಹಮ್ಮದ್ ಅಶ್ರಫ್ (20) ಹಾಗು ಫರಂಗಿಪೇಟೆಯ ಉಮ್ಮರ್ ಫಾರೂಕ್ (25) ಎಂದು ತಿಳಿದುಬಂದಿದ್ದು, ಇನ್ನುಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...