alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳೂರಲ್ಲಿ ಮತ್ತೊಂದು ಹತ್ಯೆ, ಗ್ಯಾಂಗ್ ವಾರ್ ಗೆ ಇಲ್ಯಾಸ್ ಬಲಿ

ಮಂಗಳೂರು: ಮಂಗಳೂರಿನಲ್ಲಿ ಮತ್ತೊಂದು ಹತ್ಯೆಯಾಗಿದೆ. ಟಾರ್ಗೆಟ್ ಗ್ರೂಪ್ ಮುಖ್ಯಸ್ಥ ಇಲ್ಯಾಸ್ ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ.

ಇಲ್ಯಾಸ್ 2 ದಿನಗಳ ಹಿಂದಷ್ಟೇ ಬೇಲ್ ಮೇಲೆ ಜೈಲಿನಿಂದ ಬಿಡುಗಡೆಯಾಗಿದ್ದು, ಬೆಳಿಗ್ಗೆ ಮನೆಯ ಬಳಿ ಜೊತೆಗಾರರೊಂದಿಗೆ ಮಾತನಾಡುತ್ತಿದ್ದ ಸಂದರ್ಭದಲ್ಲಿ ಮತ್ತೊಂದು ಗ್ಯಾಂಗ್ ದಾಳಿ ಮಾಡಿದೆ.

ಎದುರಾಳಿ ಗುಂಪಿನಲ್ಲಿದ್ದ ವ್ಯಕ್ತಿ ಚಾಕುವಿನಿಂದ ಇರಿದಿದ್ದು, ಕೂಡಲೇ ಇಲ್ಯಾಸ್ ನನ್ನು ಆಸ್ಪತ್ರೆಗೆ ಸೇರಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಇತ್ತೀಚೆಗಷ್ಟೇ ಸಚಿವ ಖಾದರ್ ಅವರೊಂದಿಗೆ ಇಲ್ಯಾಸ್ ಊಟ ಮಾಡಿದ್ದ ಫೋಟೋ ವೈರಲ್ ಆಗಿತ್ತು. ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿಯೂ ಇಲ್ಯಾಸ್ ಹೆಸರು ಕೇಳಿ ಬಂದಿತ್ತು.

ನಟೊರಿಯಸ್ ರೌಡಿಶೀಟರ್ ಆಗಿದ್ದ ಇಲ್ಯಾಸ್ ಉಳ್ಳಾಲ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿದ್ದ. ಈತ ಅಪರಾಧ ಹಿನ್ನಲೆ ಹೊಂದಿದ್ದರಿಂದ ಪಕ್ಷದ ಮುಖಂಡರು ನೇಮಕಾತಿ ರದ್ದುಪಡಿಸಿದ್ದರು.

ಮಂಗಳೂರು ಉಳ್ಳಾಲ ಭಾಗದಲ್ಲಿ ಟಾರ್ಗೆಟ್ ಗ್ರೂಪ್ ರಚಿಸಿಕೊಂಡಿದ್ದ ಇಲ್ಯಾಸ್ ತನ್ನ ಸಹಚರರ ಮೂಲಕ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...