alex Certify
ಕನ್ನಡ ದುನಿಯಾ       Mobile App
       

Kannada Duniya

ಈಜಲು ಹೋದ ಮೂವರು ನೀರು ಪಾಲು

water

ಮಂಗಳೂರು: ಶಾಂಭವಿ ನದಿಗೆ ಈಜಲು ಹೋದ ಮೂವರು ಯುವಕರು, ನೀರು ಪಾಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ತಾಲ್ಲೂಕಿನ ಮಟ್ಟುವು ಬಳಿ ನಡೆದಿದೆ.

ಅಕ್ಷತ್, ಕಿಶೋರ್ ಹಾಗೂ ಮಹೇಶ್ ನೀರು ಪಾಲಾದ ಯುವಕರು. ಭಾನುವಾರ ರಜೆ ಇದ್ದ ಕಾರಣ 7 ಮಂದಿ ಯುವಕರು ಶಾಂಭವಿ ನದಿಗೆ ಈಜಲು ತೆರಳಿದ್ದಾರೆ.

ಗುಂಪಿನಲ್ಲಿದ್ದ ಯುವಕನೊಬ್ಬ ನೀರಿನ ಸೆಳೆತಕ್ಕೆ ಸಿಲುಕಿದ್ದು, ರಕ್ಷಣೆಗೆ  ಧಾವಿಸಿದ ಇಬ್ಬರು ಸಹ  ನೀರು ಪಾಲಾಗಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಈಜುಗಾರರು, ಪೊಲೀಸರು, ಅಗ್ನಿಶಾಮಕದಳದ ಸಿಬ್ಬಂದಿ ನೀರು ಪಾಲಾದವರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಮುಲ್ಕಿ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...