alex Certify
ಕನ್ನಡ ದುನಿಯಾ       Mobile App
       

Kannada Duniya

ಹಲ್ಲೆಗೊಳಗಾದ್ರೂ ಸಿಂಗಲ್ಲಾಗೇ ಸಾಹಸ ಮೆರೆದ ಪೊಲೀಸ್

ಮಂಗಳೂರು: ಮಾರಣಾಂತಿಕ ಹಲ್ಲೆಗೊಳಗಾದರೂ ಪೊಲೀಸ್ ಪೇದೆಯೊಬ್ಬರು ಸಾಹಸ ಮೆರೆದು ಕಳ್ಳನೊಬ್ಬನನ್ನು ಹಿಡಿದ ಘಟನೆ ನಡೆದಿದೆ.

ಬೆಳ್ತಂಗಡಿ ಠಾಣೆಯ ಪೊಲೀಸ್ ಜಾವೀದ್ ಅವರು ಸಾಹಸ ಮೆರೆದ ಸಿಬ್ಬಂದಿಯಾಗಿದ್ದಾರೆ. ಚಾರ್ಮಾಡಿ ಘಾಟ್ ಚೆಕ್ ಪೋಸ್ಟ್ ನಲ್ಲಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲ್ಲೂಕಿನ ಬಣಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯ ಸರ ಅಪಹರಿಸಿದ್ದ ಕಳ್ಳರು ಅದೇ ಮಾರ್ಗದಲ್ಲಿ ಬರುತ್ತಿರುವ ಸುದ್ದಿ ಸಿಕ್ಕಿದೆ.

ಬೈಕ್ ನಂಬರ್ ಸಮೇತ ಮಾಹಿತಿ ನೀಡಿದ್ದರಿಂದ ಕಳ್ಳರನ್ನು ಹಿಡಿಯಲು ಜಾವೀದ್ ಮುಂದಾಗಿದ್ದಾರೆ. ಆದರೆ, ಕಳ್ಳರಿಬ್ಬರು ಜಾವೀದ್ ಅವರನ್ನು ಕೆಳಗೆ ಬೀಳಿಸಿ ಮರ್ಮಾಂಗಕ್ಕೆ ಕಾಲಿನಿಂದ ಒದ್ದಿದ್ದಾರೆ. ಜಾವೀದ್ ಗಂಭೀರವಾಗಿ ಗಾಯಗೊಂಡರೂ ಸಾಹಸ ಪ್ರಜ್ಞೆ ಮೆರೆದು ಚೈನ್ ಕಳ್ಳನೊಬ್ಬನನ್ನು ಹಿಡಿದಿದ್ದಾರೆ. ಕಳ್ಳರ ಬೈಕ್ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ. ಈ ವೇಳೆ ಮತ್ತೊಬ್ಬ ಕಳ್ಳ ಪರಾರಿಯಾಗಿದ್ದಾನೆ. ಜಾವೀದ್ ಅವರನ್ನು ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...