alex Certify
ಕನ್ನಡ ದುನಿಯಾ       Mobile App
       

Kannada Duniya

ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಕೈ ಹಾಕಿದ ಕಿರಾತಕರು

ಮಂಗಳೂರು: ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ಜೊತೆಯಾಗಿದ್ದ ಯುವಕ, ಯುವತಿಯ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯನಿರ್ವಹಿಸುವ ಯುವಕ ಮತ್ತು ಯುವತಿ ಹಲ್ಲೆಗೊಳಗಾದವರು.  ತಮ್ಮ ಹಿರಿಯ ಅಧಿಕಾರಿಯೊಬ್ಬರ ಬರ್ತಡೇ ಪಾರ್ಟಿ ಮುಗಿಸಿಕೊಂಡು, ರಾತ್ರಿ 12.30 ರ ಸುಮಾರಿಗೆ ಕಾರಿನಲ್ಲಿ ಮನೆಗೆ ಹೊರಟಿದ್ದಾರೆ. ಅವರ ಕಾರನ್ನು ಬೆನ್ನಟ್ಟಿ ಬೈಕ್ ನಲ್ಲಿ ಬಂದ ಯುವಕರ ಗುಂಪು ಅಡ್ಡಹಾಕಿದ್ದು, ಕಾರು ಡಿವೈಡರ್ ಗೆ ಡಿಕ್ಕಿಯಾಗಿ ನಿಂತಿದೆ.

ಆಗ ಯುವಕರ ಗುಂಪು, ಬಹಳ ದಿನಗಳಿಂದ ನಿಮ್ಮನ್ನು ಗಮನಿಸಿದ್ದೇವೆ. ನೀವಿಬ್ಬರು ಮಧ್ಯರಾತ್ರಿ ಎಲ್ಲಿಗೆ ಹೊರಟಿದ್ದೀರಿ ಎಂದು ಬೆದರಿಸಿ, ಇಬ್ಬರ ಮೇಲೆಯೂ ಹಲ್ಲೆ ನಡೆಸಿದ್ದಾರೆ. ಯುವಕನ ಪರ್ಸ್, ಎ.ಟಿ.ಎಂ. ಕಾರ್ಡ್ ಕಸಿದುಕೊಂಡು, ಯುವತಿಯ ಎದೆಗೆ ಕೈಹಾಕಿ, ಕಣ್ಣಿಗೆ ಗುದ್ದಿ ಚೈನ್ ಕಸಿದುಕೊಂಡಿದ್ದಾರೆ.

ನೈತಿಕ ಪೊಲೀಸ್ ಗಿರಿ ಹೆಸರಲ್ಲಿ ದೌರ್ಜನ್ಯ ನಡೆಸಿ, ಇಬ್ಬರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಗಾಯಾಳುಗಳಾಗಿರುವ ಏರ್ ಪೋರ್ಟ್ ಸಿಬ್ಬಂದಿಯನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಬಜಪೆ ಠಾಣೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...