alex Certify
ಕನ್ನಡ ದುನಿಯಾ       Mobile App
       

Kannada Duniya

ಮಸಾಜ್ ಪಾರ್ಲರ್ ನಲ್ಲಿ ನಡೆದಿದೆ ಇಂತಹ ಕೃತ್ಯ

ಮಂಗಳೂರು: ಮಸಾಜ್ ಪಾರ್ಲರ್ ಗೆ ಬಂದಿದ್ದ ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಯುವತಿಯರೊಂದಿಗೆ ಫೋಟೋ, ವಿಡಿಯೋ ತೆಗೆದು ಬ್ಲಾಕ್ ಮೇಲ್ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಸಿ.ಸಿ.ಬಿ. ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ರವಿಗೌಡ, ಪ್ರೀತೇಶ್, ರಮೇಶ್ ಹಾಗೂ ಮೂವರು ಯುವತಿಯರನ್ನು ಬಂಧಿಸಿದ್ದಾರೆ.

ಆರೋಪಿಗಳು ಮಂಗಳೂರಿನ ಮೇರಿಹಿಲ್ ನ ಮನೆಯೊಂದರಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದು, ಮಸಾಜ್ ಪಾರ್ಲರ್ ಹೆಸರಲ್ಲಿ ಹನಿಟ್ರ್ಯಾಪ್ ಮಾಡಿ ವ್ಯಕ್ತಿಗಳನ್ನು ಸುಲಿಗೆ ಮಾಡುತ್ತಿದ್ದರು.

ಮಂಗಳೂರಿನ ನಿವಾಸಿಯೊಬ್ಬರು ಮಸಾಜ್ ಪಾರ್ಲರ್ ಗೆ ಆಗಮಿಸಿದ್ದ ಸಂದರ್ಭದಲ್ಲಿ ಒಮ್ಮೆಲೆ ನುಗ್ಗಿದ ಯುವಕರ ಗುಂಪು ವ್ಯಕ್ತಿಯನ್ನು ಬೆತ್ತಲೆಗೊಳಿಸಿ, ಅಲ್ಲಿದ್ದ ಯುವತಿಯರೊಂದಿಗೆ ಫೋಟೋ, ವಿಡಿಯೋ ತೆಗೆದಿದ್ದಾರೆ. 3 ಲಕ್ಷ ರೂ. ಕೊಡದಿದ್ದರೆ, ಸೋಷಿಯಲ್ ಮೀಡಿಯಾದಲ್ಲಿ ಫೋಟೋ, ವಿಡಿಯೋ ಪೋಸ್ಟ್ ಮಾಡುವುದಾಗಿ ಬೆದರಿಸಿದ್ದಾರೆ.

ಆರೋಪಿತರಿಗೆ 3 ಲಕ್ಷ ರೂ. ಕೊಟ್ಟಿದ್ದ ವ್ಯಕ್ತಿ, ಕಾವೂರು ಠಾಣೆ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ಕೈಗೊಂಡ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಇದೇ ರೀತಿ ಹಲವರಿಗೆ ಹನಿಟ್ರ್ಯಾಪ್ ಮೂಲಕ ಹಣ ಪಡೆದು ವಂಚಿಸಿರುವ ಸಾಧ್ಯತೆ ಇದ್ದು, ತನಿಖೆ ಮುಂದುವರೆಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...