alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಟಪದಲ್ಲೇ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದ ವರ

ಮಂಗಳೂರು: 2 ನೇ ಮದುವೆಗೆ ಸಿದ್ಧವಾಗಿದ್ದ ವರ ಮಂಟಪದಲ್ಲೇ ಮೊದಲ ಪತ್ನಿಗೆ ಸಿಕ್ಕಿಬಿದ್ದ ಘಟನೆ ಮೂಲ್ಕಿಯ ಬಪ್ಪನಾಡುವಿನಲ್ಲಿ ನಡೆದಿದೆ.

ವಿದೇಶದಲ್ಲಿ ಉದ್ಯೋಗದಲ್ಲಿರುವ ಸುರತ್ಕಲ್ ಮೂಲದ ವರ, 2 ವರ್ಷಗಳ ಹಿಂದೆ ಉಡುಪಿ ಮೂಲದ ಯುವತಿಯೊಂದಿಗೆ ಮದುವೆಯಾಗಿದ್ದು, ಆಕೆಯನ್ನು ವಂಚಿಸಿ ಪಡುಬಿದ್ರಿಯ ಯುವತಿಯೊಂದಿಗೆ ಬಪ್ಪನಾಡು ಸಭಾಂಗಣದಲ್ಲಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದಾನೆ. ಇದನ್ನು ತಿಳಿದ ಮೊದಲ ಪತ್ನಿ ಪೊಲೀಸರೊಂದಿಗೆ ಮಂಟಪಕ್ಕೆ ಎಂಟ್ರಿ ಕೊಡುತ್ತಿದ್ದಂತೆ ವರ ಕಂಗಾಲಾಗಿದ್ದಾನೆ.

ವಿದೇಶದಲ್ಲೇ ಇರುವುದಾಗಿ ಮೊದಲ ಪತ್ನಿಗೆ ವರ ತಿಳಿಸಿದ್ದ ಕಾರಣ ಆಕೆ ತಲೆಕೆಡಿಸಿಕೊಂಡಿರಲಿಲ್ಲ. ಆದರೆ, ತನ್ನ ಸಂಬಂಧಿಯೇ ಆಗಿದ್ದ ಯುವತಿಯನ್ನು ಆತ ಮದುವೆಯಾಗುತ್ತಿರುವ ವಿಷಯ ತಿಳಿದ ಪತ್ನಿ ಉಡುಪಿ ಮಹಿಳಾ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

ಮದುವೆ ನಡೆಯುತ್ತಿದ್ದ ಮಂಟಪಕ್ಕೆ ತೆರಳಿ ಮದುವೆಯನ್ನು ನಿಲ್ಲಿಸಲಾಗಿದೆ. ಇದರಿಂದಾಗಿ ಮದುವೆಗೆ ಬಂದವರೆಲ್ಲಾ ಕಕ್ಕಾಬಿಕ್ಕಿಯಾಗಿದ್ದಾರೆ. ಮದುವೆ ನಿಲ್ಲಿಸಿದ್ದಕ್ಕೆ ವಧುವಿನ ಕುಟುಂಬದವರು ವರನ ಕಡೆಯವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 2 ನೇ ಮದುವೆಗೆ ಸಿದ್ಧವಾಗಿದ್ದ ವರ ಪೊಲೀಸರ ಅತಿಥಿಯಾಗಿದ್ದಾನೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...