alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕದ ಅತ್ಯಂತ ವಾಸಯೋಗ್ಯ ನಗರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಈ ಊರು

ಕೇಂದ್ರ ಗೃಹ ಇಲಾಖೆ ಮತ್ತು ನಗರಾಭಿವೃದ್ಧಿ ಸಚಿವಾಲಯ ಬಿಡುಗಡೆ ಮಾಡಿರುವ ಪಟ್ಟಿಯ ಪ್ರಕಾರ ಕರ್ನಾಟಕದ ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಮಂಗಳೂರು ಅಗ್ರ ಸ್ಥಾನವನ್ನು ಪಡೆದಿದೆ. ಕರ್ನಾಟಕದ ಮೊದಲ ವಾಸಯೋಗ್ಯ ಮತ್ತು ಸುರಕ್ಷತೆ ಇರುವಂತಾ ನಗರ ಎಂಬ ಕೀರ್ತಿಗೆ ಕಡಲ ತಡಿಯ ನಗರಿ ಪಾತ್ರವಾಗಿದೆ.

ವಾಸಯೋಗ್ಯ ನಗರಗಳ ದೇಶದ ಪಟ್ಟಿಯಲ್ಲಿ ಮಂಗಳೂರು ಒಟ್ಟಾರೆಯಾಗಿ 41ನೇ ಸ್ಥಾನದಲ್ಲಿದ್ದು, 52ನೇ ಸ್ಥಾನದಲ್ಲಿ ಬೆಳಗಾವಿ ಇದೆ. ಬೆಂಗಳೂರು 58ನೇ ಸ್ಥಾನ ಪಡೆದು ವಾಸಯೋಗ್ಯ ನಗರಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ. ನಾಲ್ಕು ವಿಚಾರಗಳ ಆಧಾರದ ಮೇಲೆ ವಾಸಯೋಗ್ಯ ನಗರಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು, ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿ ಮತ್ತು ಮೂಲ ಸೌಕರ್ಯಗಳ ಅಭಿವೃದ್ಧಿಯ ಆಧಾರದಲ್ಲಿ ನಗರಗಳ ವಾಸಯೋಗ್ಯ ಪರಿಸ್ಥಿತಿಯನ್ನು ಅಳೆಯಲಾಗಿದೆ.

ವಿಚಿತ್ರ ಏನಂದ್ರೆ ಪ್ರತಿಕೂಲ ಸಾಮಾಜಿಕ ವ್ಯವಸ್ಥೆಯ ಕಾರಣಕ್ಕಾಗಿ ಮಂಗಳೂರು 33ನೇ ಸ್ಥಾನದಲ್ಲಿದೆ. ತ್ಯಾಜ್ಯ ಸಂಸ್ಕರಣ ಘಟಕಗಳ ನಿರ್ವಹಣೆ, ವಿದ್ಯಾಭ್ಯಾಸಗಳಲ್ಲಿ ಕಡಲ ತಡಿಯ ನಗರಿ ಮುಂದಿದೆ. ಸಂಸ್ಕೃತಿಯ ವಿಚಾರದಲ್ಲೂ ಮಂಗಳೂರು ಮುಂಚೂಣಿಯಲ್ಲಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹೊಡೆದಾಟ ಬಡಿದಾಟದ ವಿಚಾರ ಕೊಂಚ ಮಟ್ಟಿಗೆ ಮಂಗಳೂರಿನ ಘನತೆಗೆ ಕುಂದು ತಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...