alex Certify
ಕನ್ನಡ ದುನಿಯಾ       Mobile App
       

Kannada Duniya

ಲೇಡಿಸ್ ಸೀಟ್ ನಲ್ಲಿ ಕುಳಿತ ಯುವಕನನ್ನು ತರಾಟೆಗೆ ತೆಗೆದುಕೊಂಡ ಮಹಿಳೆ

ಮಂಗಳೂರು: ಬಸ್ಸಿನಲ್ಲಿ ಮಹಿಳೆಯರಿಗೆ ಮೀಸಲಾದ ಸೀಟಿನಲ್ಲಿ ಪುರುಷರು ಕುಳಿತುಕೊಳ್ಳುವುದು ಹೊಸದೇನಲ್ಲ. ಹೀಗೆ ಕುಳಿತುಕೊಂಡಿದ್ದ ಪುರುಷರು ಮಹಿಳೆಯರು ಬಂದಾಕ್ಷಣ ಸೀಟು ಬಿಟ್ಟುಕೊಡುವುದು ಸಾಮಾನ್ಯ ಸಂಗತಿ.

ಬಸ್ಸಿನಲ್ಲಿ ಮಹಿಳೆಯರ ಸೀಟಿನಲ್ಲಿ ಕುಳಿತಿದ್ದ ಯುವಕನೊಬ್ಬನನ್ನು ಮಹಿಳೆಯೊಬ್ಬರು ತರಾಟೆಗೆ ತೆಗೆದುಕೊಂಡು ಎಬ್ಬಿಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಸರ್ಕಾರಿ ಬಸ್ ನಲ್ಲಿ ಮಹಿಳೆಯರು ನಿಂತುಕೊಂಡು ಪ್ರಯಾಣಿಸುತ್ತಿದ್ದರೂ, ಮಹಿಳೆಯರಿಗೆ ಮೀಸಲಾದ ಸೀಟಿನಲ್ಲಿ ಕುಳಿತಿದ್ದ ಯುವಕ ಸೀಟು ಬಿಟ್ಟುಕೊಟ್ಟಿಲ್ಲ. ಇದರಿಂದ ಆಕ್ರೋಶಗೊಂಡ ಮಹಿಳೆ ಸೀಟು ಬಿಟ್ಟುಕೊಡುವಂತೆ ಯುವಕನಿಗೆ ದಬಾಯಿಸಿದ್ದಾರೆ.

ಇಷ್ಟೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿದ್ದು, ಯುವಕ ಸೀಟು ಬಿಟ್ಟುಕೊಡಲು ನಿರಾಕರಿಸಿದ್ದಾನೆ. ಆದರೆ, ಪಟ್ಟು ಬಿಡದ ಮಹಿಳೆ ಕೂಗಾಟ, ರಂಪಾಟ ನಡೆಸಿ ಯುವಕನನ್ನು ಎಬ್ಬಿಸಿ ಕುಳಿತುಕೊಂಡಿದ್ದಾರೆ.

ಈ ವೇಳೆ ಬಸ್ಸಿನಲ್ಲಿ ಪ್ರಯಾಣಿಕರಿದ್ದರೂ, ಜಗಳವಾಡುತ್ತಿದ್ದ ಇಬ್ಬರನ್ನು ಯಾರೂ ಸಮಾಧಾನಪಡಿಸಿಲ್ಲ. ಘಟನೆಯ ದೃಶ್ಯಗಳನ್ನು ಸೆರೆಹಿಡಿದವರೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...