alex Certify
ಕನ್ನಡ ದುನಿಯಾ       Mobile App
       

Kannada Duniya

ಬೀದಿ ನಾಯಿಗಾಗಿ ಕೂಡಿಟ್ಟ ಹಣವನ್ನೆಲ್ಲ ಖರ್ಚು ಮಾಡಿದ್ದಾನೆ ಬಾಲಕ

ಮಕ್ಕಳದ್ದು ಮುಗ್ಧ ಮನಸ್ಸು, ಮೃದು ಹೃದಯ ಅನ್ನೋ ಮಾತೇ ಇದೆ. ಯಾರಿಗಾದ್ರೂ ಸಹಾಯ ಮಾಡಬೇಕು ಅಂದ್ರೆ ಮಕ್ಕಳು ಸದಾ ಮುಂದಿರುತ್ತಾರೆ. ಮಂಗಳೂರಿನಲ್ಲಿ 7 ನೇ ತರಗತಿಯ ಬಾಲಕನೊಬ್ಬ ಮೌನ ಎಂಬ ಬೀದಿನಾಯಿಗೆ ಮರು ಜೀವ ಕೊಟ್ಟಿದ್ದಾನೆ.

ಬೆಂಗಳೂರಿನ ವೈಟ್ ಫೀಲ್ಡ್ ಬಳಿಯಿರೋ ನಾಗೊಂಡನಹಳ್ಳಿಯಲ್ಲಿ ಕಾರ್ ಒಂದು ಡಿಕ್ಕಿಯಾಗಿ ನಾಯಿ ತೀವ್ರವಾಗಿ ಗಾಯಗೊಂಡಿತ್ತು. ಅಪಘಾತ ನಡೆದ ಸ್ಥಳದಲ್ಲಿದ್ದ ಅಂಕುರ್ ಭಟ್ನಾಗರ್ ಎಂಬಾತ ನಾಯಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಕಾಲುಗಳಿಗೆ ತೀವ್ರ ಪೆಟ್ಟಾಗಿದ್ದರಿಂದ ನಾಯಿಗೆ ನಡೆದಾಡಲು ಕೂಡ ಸಾಧ್ಯವಾಗುತ್ತಿರಲಿಲ್ಲ.

ಹೈಡ್ರೋಥೆರಪಿ ಮತ್ತು ಲೇಸರ್ ಚಿಕಿತ್ಸೆ ನೀಡಿದ್ರೆ ಮತ್ತೆ ನಾಯಿ ನಡೆದಾಡಬಲ್ಲದು ಅಂತಾ ವೈದ್ಯರು ಹೇಳಿದ್ದರು. ನಾಯಿಯ ಚಿಕಿತ್ಸೆಗೆ ಸಹಾಯ ಮಾಡುವಂತೆ ಅಂಕುರ್ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ನೋಡಿದ ಬೆಂಗಳೂರಿನ ರೇಖಾ ವಿಜಯ್ ಕುಮಾರ್ ತಾವು ನಾಯಿಯ ಆರೈಕೆ ಮಾಡುವುದಾಗಿ ಕರೆತಂದಿದ್ದರು.

ರೇಖಾ ಹಾಕಿದ್ದ ಶ್ವಾನದ ಫೋಟೋಗಳು ಸ್ನೇಹಿತ ಮಹೇಶ್ ನಾಯಕ್ ಅವರ ಗಮನ ಸೆಳೆದಿದೆ. ಅವರ ಪುಟಾಣಿ ಸ್ನೇಹಿತ 7ನೇ ತರಗತಿಯ ಅಭಿನವ್ ರಾವ್ ತಾನು ನಾಯಿಗೆ ಸಹಾಯ ಮಾಡೋದಾಗಿ ಮುಂದೆ ಬಂದಿದ್ದಾನೆ. ಇದಕ್ಕಾಗಿ ತನ್ನ ಪಿಗ್ಗಿ ಬ್ಯಾಂಕ್ ಒಡೆದು ಅದರಲ್ಲಿದ್ದ 3900 ರೂಪಾಯಿ ಕೊಟ್ಟಿದ್ದಾನೆ.

ಮಹೇಶ್, ರೇಖಾ ಮತ್ತವರ ಉಳಿದ ಸ್ನೇಹಿತರು ಸೇರಿ ಬಾಕಿ ಹಣವನ್ನು ಹಾಕಿಕೊಂಡು ಬೀದಿನಾಯಿಗೆ ವ್ಹೀಲ್ ಕಾರ್ಟ್ ತಂದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಅಭಿನವ್ ಗೆ ಪ್ರಾಣಿಗಳ ಬಗ್ಗೆ ಇರುವ ಕಾಳಜಿ ಮೆಚ್ಚುಗೆಗೆ ಪಾತ್ರವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...