alex Certify
ಕನ್ನಡ ದುನಿಯಾ       Mobile App
       

Kannada Duniya

ಮಂಗಳೂರಲ್ಲಿ ಗೈಡಿಂಗ್ ಲೈಟ್ಸ್ ಗೆ ವಿಮಾನ ಡಿಕ್ಕಿ

man-airport

ಮಂಗಳೂರು: ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ರನ್ ವೇ ನಲ್ಲಿ ಸಾಗುತ್ತಿದ್ದ ವಿಮಾನ, ಗೈಡಿಂಗ್ ಲೈಟ್ಸ್ ಗೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

186 ಪ್ರಯಾಣಿಕರಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ 814 ವಿಮಾನ ದುಬೈನಿಂದ ಮಂಗಳೂರಿಗೆ ಆಗಮಿಸಿದೆ. ಲ್ಯಾಂಡ್ ಆಗಿ ರನ್ ವೇ ನಲ್ಲಿ ಸಾಗುವಾಗ, ಪಕ್ಕಕ್ಕೆ ಜಾರಿದ್ದು, ಗೈಡಿಂಗ್ ಲೈಟ್ ಗೆ ಡಿಕ್ಕಿ ಹೊಡೆದಿದೆ.

ಇದು ಪೈಲಟ್ ಗಮನಕ್ಕೂ ಬಂದಿಲ್ಲ. ಎ.ಟಿ.ಸಿ. ನಿರ್ವಹಣಾ ತಂಡ ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಗೈಡಿಂಗ್ ಲೈಟ್ ಗೆ ಹಾನಿಯಾಗಿರುವುದು ಬೆಳಕಿಗೆ ಬಂದಿದೆ.

ಏರ್ ಇಂಡಿಯಾ ಸುರಕ್ಷತಾ ವಿಭಾಗದ ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕರಾವಳಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯ ಸರ್ಕಾರ ವಿಫಲವಾಗಿದೆಯೇ..?

    View Results

    Loading ... Loading ...