alex Certify ಪರಿಶೀಲನೆ ವೇಳೆ ಬಯಲಾಯ್ತು ಅಸಲಿಯತ್ತು: ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಿಸುತ್ತಿದ್ದ ಖದೀಮ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಶೀಲನೆ ವೇಳೆ ಬಯಲಾಯ್ತು ಅಸಲಿಯತ್ತು: ಒಳ ಉಡುಪಿನಲ್ಲಿಟ್ಟುಕೊಂಡು ಚಿನ್ನ ಸಾಗಿಸುತ್ತಿದ್ದ ಖದೀಮ ಅರೆಸ್ಟ್

ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ. ಬಂಧಿತನಿಂದ 1.23 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.

ಕೇರಳ ಕಾಸರಗೋಡು ಮೂಲದ ಇಸ್ಮಾಯಿಲ್ ಅಹಮ್ಮದ್ ಬಂಧಿತ ವ್ಯಕ್ತಿ. ದುಬೈನಿಂದ ಮಂಗಳೂರಿಗೆ ಆಗಮಿಸಿದ ಇಸ್ಮಾಯಿಲ್ ಅಂಟಿನಲ್ಲಿ ಚಿನ್ನದ ಪುಡಿಯನ್ನು ಸೇರಿಸಿಕೊಂಡು ಅದನ್ನು ಒಳಉಡುಪಿನಲ್ಲಿಟ್ಟುಕೊಂಡಿದ್ದ. ಅಲ್ಲದೆ ಸರಪಳಿಯ ರೂಪದಲ್ಲಿದ್ದ ಚಿನ್ನವನ್ನು ಕೂಡ ಸಾಗಿಸುತ್ತಿರುವುದು ಗೊತ್ತಾಗಿದೆ.

ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪರಿಶೀಲನೆ ಮಾಡಿದಾಗ ಅಕ್ರಮವಾಗಿ ಚಿನ್ನ ಸಾಗಿಸುತ್ತಿರುವುದು ಕಂಡುಬಂದಿದ್ದು ಆತನನ್ನು ಬಂಧಿಸಲಾಗಿದೆ. 57.14 ಲಕ್ಷ ರೂಪಾಯಿ ಮೌಲ್ಯದ 1.23 ಕೆಜಿ ಚಿನ್ನ ವಶಕ್ಕೆ ಪಡೆಯಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...