alex Certify
ಕನ್ನಡ ದುನಿಯಾ       Mobile App
       

Kannada Duniya

FB ನಲ್ಲಿ ಕಾಮುಕನ ಬಣ್ಣ ಬಯಲು ಮಾಡಿದ್ದಾಳೆ ಯುವತಿ

bike

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಇಂದು ನಿನ್ನೆಯದಲ್ಲ. ಸಮಾಜದಲ್ಲಿ ಸ್ತ್ರೀಯರಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಆದ್ರೆ ಈಗ ಇಂತಹ ದೌರ್ಜನ್ಯಗಳ ವಿರುದ್ಧ ಖುದ್ದು ಮಹಿಳೆಯರೇ ಧ್ವನಿಯೆತ್ತುತ್ತಿದ್ದಾರೆ. ನ್ಯಾಯಕ್ಕಾಗಿ ಹೋರಾಟ ಆರಂಭಿಸಿದ್ದಾರೆ.

ಮಂಗಳೂರಿನ ಜನನಿಬಿಡ ರಸ್ತೆಯಲ್ಲಿ ಹಾಡಹಗಲೇ ಕಾಮುಕನೊಬ್ಬ ರಶ್ಮಿ ಶೆಟ್ಟಿ ಎಂಬ 22 ವರ್ಷದ ಯುವತಿಯ ಬೆನ್ನು ಬಿದ್ದಿದ್ದ. ಈ ಘಟನೆಯನ್ನು ರಶ್ಮಿ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಆತನ ವಾಹನದ ಸಂಖ್ಯೆಯ ಸಮೇತ ನಡೆದ ಘಟನೆಯನ್ನು ವಿವರಿಸಿದ್ದಾರೆ.

ಎಂಎ ಓದ್ತಾ ಇರೋ ರಶ್ಮಿಗೆ ಈ ಹಿಂದೆಯೂ ಇಂಥದ್ದೇ ಅನುಭವವಾಗಿತ್ತು. ಆದ್ರೆ ಇಂತಹ ನೀಚ ಕೃತ್ಯಗಳಿಗೆ ಹೆದರಿ ಸುಮ್ಮನೆ ಕೂರುವ ಜಾಯಮಾನ ತನ್ನದಲ್ಲ ಅಂತಾ ರಶ್ಮಿ ನೇರವಾಗಿಯೇ ಹೇಳಿಕೊಂಡಿದ್ದಾರೆ. ಇಂತಹ ದೌರ್ಜನ್ಯಗಳನ್ನು ಸಮಾಜ ನೋಡುವ ದೃಷ್ಟಿಕೋನ, ಮಹಿಳೆಯರಲ್ಲೇ ತಪ್ಪು ಹುಡುಕುವ ಜನರ ವರ್ತನೆಯನ್ನು ಖಂಡಿಸಿದ್ದಾರೆ.

ಹಿಂಬಾಲಿಸಿಕೊಂಡು ಬಂದಿದ್ದ ವ್ಯಕ್ತಿಯ ಸ್ಕೂಟರ್ ಫೋಟೋವನ್ನು ರಶ್ಮಿ ಫೇಸ್ಬುಕ್ ನಲ್ಲಿ ಹಾಕಿದ್ದಾರೆ. ಮಹಿಳೆಯರಿಗೆ ಕಿರುಕುಳ ಕೊಡುವ ಕಾಮುಕರಿಗೆ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದಾರೆ. ರಶ್ಮಿಯ ಫೇಸ್ಬುಕ್ ಪೋಸ್ಟ್ ಗೆ 1700ಕ್ಕೂ ಹೆಚ್ಚು ಕಮೆಂಟ್ಸ್ ಬಂದಿವೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...