alex Certify
ಕನ್ನಡ ದುನಿಯಾ       Mobile App
       

Kannada Duniya

ಜಲಪಾತಕ್ಕೆ ಬಿದ್ದವ ಸಾವನ್ನೇ ಜಯಿಸಿದ

ಮಂಡ್ಯ: ಕಾಲುಜಾರಿ ಜಲಪಾತಕ್ಕೆ ಬಿದ್ದ ವ್ಯಕ್ತಿಯೊಬ್ಬರು 2 ದಿನಗಳ ನಂತರ ಪಾರಾಗಿ ಬಂದಿದ್ದಾರೆ. ಬೆಂಗಳೂರಿನ ಖಾದರ್ ಎಂಬುವವರು ಶನಿವಾರ ಮಧ್ಯಾಹ್ನ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗಗನಚುಕ್ಕಿ ಜಲಪಾತ ವೀಕ್ಷಣೆಗೆ ಬಂದಿದ್ದಾರೆ.

ಅವರೊಬ್ಬರೇ ಜಲಪಾತ ವೀಕ್ಷಿಸುವಾಗ ಕಾಲು ಜಾರಿ ಬಿದ್ದಿದ್ದು, ಬಿದ್ದ ರಭಸಕ್ಕೆ ಕಾಲು ಮುರಿದು ಅವರಿಗೆ ಪ್ರಜ್ಞೆ ತಪ್ಪಿದೆ. ಎಚ್ಚರವಾದಾಗ ರಾತ್ರಿಯಾಗಿದ್ದು, ಅವರು ಕೂಗಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ.

ಸೋಮವಾರ ಮಧ್ಯಾಹ್ನದವರೆಗೂ ಬಂಡೆಯ ಮೇಲೆ ನೀರಿನ ನಡುವೆ ಇದ್ದ ಅವರು ನೀರು ಕುಡಿದೇ ಬದುಕಿದ್ದಾರೆ. ಸೋಮವಾರ ಮಧ್ಯಾಹ್ನ ಜಲಪಾತ ವೀಕ್ಷಣೆಗೆ ಪ್ರವಾಸಿಗರು ಬಂದಿದ್ದನ್ನು ಗಮನಿಸಿದ ಖಾದರ್, ತಾನು ತೊಟ್ಟಿದ್ದ ಜರ್ಕಿನ್ ಬಿಚ್ಚಿ ತಿರುಗಿಸಿದ್ದು, ಇದನ್ನು ಗಮನಿಸಿದ ಪ್ರವಾಸಿಗರು ಬೆಳಕವಾಡಿ ಪೊಲೀಸರಿಗೆ ತಿಳಿಸಿದ್ದಾರೆ.

ಪೊಲೀಸರು ಸ್ಥಳೀಯರ ನೆರವಿನಿಂದ ಖಾದರ್ ನನ್ನು ರಕ್ಷಿಸಿದ್ದಾರೆ. 2 ದಿನಗಳ ಕಾಲ ಸಾವು-ಬದುಕಿನ ನಡುವೆ ಹೋರಾಟ ನಡೆಸಿದ ಖಾದರ್ ನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...