alex Certify
ಕನ್ನಡ ದುನಿಯಾ       Mobile App
       

Kannada Duniya

ರೋಗಿಗಳ ಪಾಲಿನ ದೇವರು ಈ ವೈದ್ಯ

ಮಂಡ್ಯ: ಕೆ.ಪಿ.ಎಂ.ಇ. ಕಾಯ್ದೆ ತಿದ್ದುಪಡಿ ವಿರೋಧಿಸಿ ವೈದ್ಯರು ಪ್ರತಿಭಟನೆ ಕೈಗೊಂಡಿದ್ದು, ಸಕಾಲಕ್ಕೆ ಚಿಕಿತ್ಸೆ ಸಿಗದೇ ಅನೇಕರು ಸಾವನ್ನಪ್ಪಿದ್ದಾರೆ.

ಇದೇ ಸಂದರ್ಭದಲ್ಲಿ ಕೆಲವು ಖಾಸಗಿ ವೈದ್ಯರು ಮತ್ತು ಆಸ್ಪತ್ರೆಗಳು ರೋಗಿಗಳೊಂದಿಗೆ ನಡೆದುಕೊಳ್ಳುವ ರೀತಿಯ ಕುರಿತಾಗಿಯೂ ವ್ಯಾಪಕ ಚರ್ಚೆಯಾಗ್ತಿದೆ. ಅಲ್ಲದೇ, ಕೆಲವು ಮಾನವೀಯ ಗುಣವುಳ್ಳ ಅಪರೂಪದ ವೈದ್ಯರ ಕುರಿತು ಚರ್ಚೆಯಾಗಿದೆ.

ಮಂಡ್ಯದಲ್ಲಿ 5 ರೂಪಾಯಿ ವೈದ್ಯರೆಂದೇ ಹೆಸರಾಗಿರುವ ಡಾ.ಎಸ್.ಸಿ. ಶಂಕರೇಗೌಡ ಅವರು ವೈದ್ಯರ ಮುಷ್ಕರದ ನಡುವೆಯೂ ರೋಗಿಗಳಿಗೆ ಎಂದಿನಂತೆ ಚಿಕಿತ್ಸೆ ನೀಡುತ್ತಿದ್ದಾರೆ.

ನವೆಂಬರ್ 13 ರಿಂದ ಖಾಸಗಿ ವೈದ್ಯರ ಮುಷ್ಕರ ನಡೆಯುತ್ತಿದೆ. ನವೆಂಬರ್ 3 ರಂದು ಕೂಡ ವೈದ್ಯರು ಮುಷ್ಕರ ನಡೆಸಿದ್ದರು. ಈ ಮುಷ್ಕರದಲ್ಲಿ ಪಾಲ್ಗೊಳ್ಳದೇ ಶಂಕರೇಗೌಡರು ಎಂದಿನಂತೆಯೇ ತಮ್ಮ ಕ್ಲಿನಿಕ್ ನಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಕೆ.ಪಿ.ಎಂ.ಇ. ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿರುವುದು ಸ್ವಾಗತಾರ್ಹವಾಗಿದೆ. ಸೇವೆ ನಿಲ್ಲಿಸುವಂತೆ ಒತ್ತಡ ಬಂದರೂ ನಾನು ಒಪ್ಪದೇ ಚಿಕಿತ್ಸೆ ನೀಡುತ್ತಿದ್ದೇನೆ. ಇದು ನನ್ನ ಕರ್ತವ್ಯ ಕೂಡ ಎಂದು ಶಂಕರೇಗೌಡರು ಹೇಳಿದ್ದಾರೆ.

5 ರೂಪಾಯಿ ವೈದ್ಯರೆಂದೇ ಶಂಕರೇಗೌಡರು ಪ್ರಸಿದ್ಧರಾಗಿದ್ದು, ಜನಾನುರಾಗಿಯಾಗಿದ್ದಾರೆ. ಅವರ ಕ್ಲಿನಿಕ್ ಗೆ ರೋಗಿಗಳು ಆಗಮಿಸಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...