alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೋಟವಾಯ್ತು ರೆಡ್ ಮಿ ಮೊಬೈಲ್ ಫೋನ್

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರದ ಮೊಬೈಲ್ ಅಂಗಡಿಯೊಂದರಲ್ಲಿ ರೆಡ್ ಮಿ ನೋಟ್ 4 ಮೊಬೈಲ್ ಸ್ಪೋಟಗೊಂಡಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಪ್ರದೀಪ್ ಎಂಬುವವರಿಗೆ ಸೇರಿದ ಮೊಬೈಲ್ ಅಂಗಡಿಯಲ್ಲಿ ಶುಕ್ರವಾರ ಘಟನೆ ನಡೆದಿದೆ. ಪ್ರದೀಪ್ ತಮ್ಮ ಸಹೋದರನಿಗೆ ಸೇರಿದ ರೆಡ್ ಮಿ ನೋಟ್ 4 ಮೊಬೈಲ್ ಡಿಸ್ ಪ್ಲೇ ದುರಸ್ತಿಗೆ ಬ್ಯಾಟರಿ ತೆಗೆಯುವ ಸಂದರ್ಭದಲ್ಲಿ ಹೊಗೆ ಕಾಣಿಸಿಕೊಂಡಿದೆ.

ಕ್ಷಣಾರ್ಧದಲ್ಲೇ ಅವರು ಮೊಬೈಲ್ ಎಸೆದಿದ್ದು, ಅಲ್ಲೇ ಸ್ಪೋಟವಾಗಿದೆ. ಸ್ಪೋಟಗೊಂಡ ಮೊಬೈಲ್ ಸುಟ್ಟುಹೋಗಿದೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಮೊಬೈಲ್ ಸ್ಪೋಟದ ದೃಶ್ಯ ಸಿ.ಸಿ. ಟಿ.ವಿ. ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜಾಲತಾಣದಲ್ಲಿ ವಿಡಿಯೋ ಹಾಕಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...