alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ.ಎಂ. ಮನವೊಲಿಕೆಗೆ ಮಣಿದ ಸಿ.ಎಸ್. ಪುಟ್ಟರಾಜು

ತಮಗೆ ಸಣ್ಣ ನೀರಾವರಿ ಖಾತೆ ನೀಡಿರುವುದರಿಂದ ಅಸಮಾಧಾನಗೊಂಡಿದ್ದ ಮಂಡ್ಯ ಜಿಲ್ಲೆ ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್. ಪುಟ್ಟರಾಜು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ಮನವೊಲಿಕೆಗೆ ಮಣಿದಿದ್ದಾರೆಂದು ತಿಳಿದುಬಂದಿದ್ದು, ತಮಗೆ ಸಿಕ್ಕಿರುವ ಖಾತೆಯಲ್ಲೇ ಸಚಿವರಾಗಿ ಮುಂದುವರಿಯಲು ಸಮ್ಮತಿಸಿದ್ದಾರೆನ್ನಲಾಗಿದೆ.

ಒಂದು ವರ್ಷ ಕಾಲ ಸಣ್ಣ ನೀರಾವರಿ ಖಾತೆಯಲ್ಲಿ ಸಚಿವರಾಗಿ ಕೆಲಸ ಮಾಡಿ. ಬಳಿಕ ಬೇರೊಂದು ಖಾತೆ ನೀಡುವುದಾಗಿ ಕುಮಾರಸ್ವಾಮಿಯವರು ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಇದಕ್ಕೆ ಒಪ್ಪಿಕೊಂಡಿರುವ ಪುಟ್ಟರಾಜು, ಪ್ರತಿಭಟನೆ ನಡೆಸಲು ಮುಂದಾಗಿದ್ದ ತಮ್ಮ ಬೆಂಬಲಿಗರಿಗೆ ಸುಮ್ಮನಿರುವಂತೆ ಸೂಚಿಸಿದ್ದಾರೆ.

ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾಗುವ ಕುರಿತು ಪುಟ್ಟರಾಜು ಹಾಗೂ ಡಿ.ಸಿ. ತಮ್ಮಣ್ಣ ನಡುವೆ ಪೈಪೋಟಿ ನಡೆದಿದ್ದು, ಉಸ್ತುವಾರಿಯನ್ನು ಪುಟ್ಟರಾಜು ಅವರಿಗೇ ನೀಡಲು ಮುಖ್ಯಮಂತ್ರಿ ಕುಮಾರಸ್ವಾಮಿ ತೀರ್ಮಾನಿಸಿದ್ದಾರೆಂದು ತಿಳಿದುಬಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...