alex Certify
ಕನ್ನಡ ದುನಿಯಾ       Mobile App
       

Kannada Duniya

ಅಚ್ಚರಿ! ಮನೆಯಲ್ಲೇ ಬೆಳೆಯುತ್ತಿದೆ ಹುತ್ತ

ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಬಿದಿರ ಹೊಸಹಳ್ಳಿಯ ಮಹೇಶ್ ಎಂಬುವವರ ಮನೆಯಲ್ಲಿ ಹುತ್ತ ಬೆಳೆಯುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ.

ಸುಮಾರು 8 ವರ್ಷಗಳ ಹಿಂದೆ ಮಹೇಶ್ ಮನೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದು, ನಿರ್ಮಾಣ ಹಂತದಲ್ಲೇ ಹುತ್ತ ಕಾಣಿಸಿಕೊಂಡಿದ್ದು, ಅದನ್ನು ತೆಗೆಸಿ ಕಾಮಗಾರಿ ಮುಂದುವರೆಸಲಾಗಿದೆ. ನಂತರದಲ್ಲಿ ಮಹೇಶ್ ಅವರಿಗೆ ಆರ್ಥಿಕ ಸಮಸ್ಯೆ ಎದುರಾಗಿ ಕುಟುಂಬದವರ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ.

ಮನೆಯಲ್ಲಿದ್ದ ಹುತ್ತವನ್ನು ತೆಗೆಸಿದರೂ ಅದು ಮತ್ತೆ ಬೆಳೆದಿದ್ದರಿಂದ ಹಾಗೆಯೇ ಉಳಿಸಿಕೊಂಡಿದ್ದಾರೆ. ಮನೆಯನ್ನು ಇನ್ನೂ ಪೂರ್ಣಗೊಳಿಸಿಲ್ಲ. ಗೃಹಪ್ರವೇಶವೂ ಆಗಿಲ್ಲ. ಒಮ್ಮೆ ಮಾತ್ರ ಹಾವು ಕಾಣಿಸಿಕೊಂಡಿದೆ. ಉಳಿದಂತೆ ಹುತ್ತಕ್ಕೆ ನಿತ್ಯವೂ ಪೂಜೆ ಸಲ್ಲಿಸಲಾಗುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...