alex Certify
ಕನ್ನಡ ದುನಿಯಾ       Mobile App
       

Kannada Duniya

ಕೇಕ್ ತಿಂದು ಗರ್ಭಿಣಿ ಸೇರಿ 11 ಮಂದಿ ಅಸ್ವಸ್ಥ

ಮಂಡ್ಯ: ಮಂಡ್ಯ ಜಿಲ್ಲೆ ಕೆ.ಆರ್. ಪೇಟೆ ಪಟ್ಟಣದ ಬೇಕರಿಯಲ್ಲಿ ತಂದಿದ್ದ ಕೇಕ್ ತಿಂದು ಗರ್ಭಿಣಿ, ಮಕ್ಕಳು ಸೇರಿ 11 ಮಂದಿ ಅಸ್ವಸ್ಥರಾಗಿದ್ದಾರೆ.

ಕೆ.ಆರ್. ಪೇಟೆಯಲ್ಲಿನ ಬೇಕರಿಯೊಂದರಲ್ಲಿ ಕೇಕ್ ಖರೀದಿಸಿ ತಿಂದವರೆಲ್ಲ ಅಸ್ವಸ್ಥರಾಗಿದ್ದು, ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ರಾತ್ರಿ ಈ ಬೇಕರಿಯಿಂದ ತಂದಿದ್ದ ಕೇಕ್ ಸೇವಿಸಿ ನಾಲ್ವರು ಮಕ್ಕಳು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಇದೇ ರೀತಿ ವಿವಿಧೆಡೆಯಲ್ಲಿ ಕೇಕ್ ತಿಂದು ಮಕ್ಕಳಿಗೆ ವಾಂತಿ, ಭೇದಿಯಾಗಿದ್ದು, ಅಸ್ವಸ್ಥರಾದ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಗರ್ಭಿಣಿಯೊಬ್ಬರು ಕೂಡ ಕೇಕ್ ತಿಂದು ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಮಕ್ಕಳು ಪೋಷಕರು ಮತ್ತು ಕುಟುಂಬದವರಲ್ಲಿ ಆತಂಕ ಮೂಡಿದೆ. ಅಸ್ವಸ್ಥರಾದ ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಆಸ್ಪತ್ರೆಗೆ ಸೇರಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...