alex Certify
ಕನ್ನಡ ದುನಿಯಾ       Mobile App
       

Kannada Duniya

ಕಳ್ಳ ಇಲಿಗೆ ಚಿತ್ರಹಿಂಸೆ ನೀಡಿದ ಅಂಗಡಿ ಮಾಲೀಕ

ಮೈಸೂರಿನಲ್ಲಿ ಕಳ್ಳ ಇಲಿಯನ್ನು ಅಂಗಡಿ ಮಾಲೀಕನೊಬ್ಬ ಹಿಂಸಿಸಿರುವ ವಿಡಿಯೋ ವೈರಲ್ ಆಗಿದೆ. ದಿನಸಿ ಅಂಗಡಿ ಇಟ್ಕೊಂಡಿರೋ ಮೇಲಹಳ್ಳಿ ರಾಮಣ್ಣ ಎಂಬಾತ ಈ ಕೃತ್ಯ ಎಸಗಿದ್ದಾನೆ. ಅಂಗಡಿಯೊಳಕ್ಕೆ ಇಲಿ ಸೇರಿಕೊಂಡಿತ್ತು. ಕಾಳು ಕಡಿಯನ್ನೆಲ್ಲ ತಿಂದು ಹಾಕುತ್ತಿತ್ತು.

ಇದರಿಂದ ರಾಮಣ್ಣನ ಪಿತ್ತ ನೆತ್ತಿಗೇರಿದೆ. ಇಲಿಯನ್ನು ಜಾರ್ ಒಂದಕ್ಕೆ ಕಟ್ಟಿಹಾಕಿ ಆತ ಚಿತ್ರಹಿಂಸೆ ನೀಡಿದ್ದಾನೆ. ಕೋಲಿನಿಂದ ಒಂದೇ ಸಮನೆ ಹೊಡೆದಿದ್ದಾನೆ. ಪಾಪದ ಇಲಿ ನೋವಿನಿಂದ ಕೂಗಿಕೊಳ್ಳುತ್ತಿತ್ತು. ರಾಮಣ್ಣ ಹೊಡೆದ ರಭಸಕ್ಕೆ ಜಾರ್ ಕೂಡ ಕೆಳಕ್ಕೆ ಬಿದ್ದಿತ್ತು.

ಅದನ್ನು ಮತ್ತೆ ಮೇಲಕ್ಕೆ ಎತ್ತಿಟ್ಟುಕೊಂಡು ಆತ ಇಲಿಯನ್ನು ಥಳಿಸಿದ್ದಾನೆ. ದವಸ, ಧಾನ್ಯ ಇರುವ ಕಡೆ ಇಲಿಗಳು ನುಗ್ಗೋದು ಸಾಮಾನ್ಯ. ಅವುಗಳನ್ನು ಹಿಡಿದು ಬೇರೆಡೆಗೆ ಬಿಟ್ಟು ಬರಬಹುದು. ಆದ್ರೆ ರಾಮಣ್ಣ ಮಾತ್ರ ಇಲಿಗೆ ಚಿತ್ರಹಿಂಸೆ ನೀಡಿರೋದು ತೀವ್ರ ಟೀಕೆಗೆ ಗುರಿಯಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...