alex Certify
ಕನ್ನಡ ದುನಿಯಾ       Mobile App
       

Kannada Duniya

ಮನೆ ಮೇಲೆ ಹೂಮಳೆ ಸುರಿಸಲು ಕೋರ್ಟ್ ಗೆ ಮೊರೆ

heli

ಗೃಹಪ್ರವೇಶದ ಸಂದರ್ಭದಲ್ಲಿ ಮನೆಯ ಮೇಲೆ ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲು ಅವಕಾಶ ನೀಡುವಂತೆ ಬೆಂಗಳೂರು ನಿವಾಸಿಯೊಬ್ರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಪೊಲೀಸರಿಗೆ ನೋಟಿಸ್ ನೀಡಿರುವ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ವಿಚಾರಣೆಯನ್ನು ಫೆಬ್ರವರಿ 6ಕ್ಕೆ ಮುಂದೂಡಿದ್ದಾರೆ.

ಬೆಂಗಳೂರು ಪೂರ್ವ ತಾಲೂಕಿನಲ್ಲಿ ಎಂ.ಮುನಿರಾಜು ಎಂಬಾತ ಮನೆ ಕಟ್ಟಿಸಿದ್ದಾರೆ. ಇದೇ ಫೆಬ್ರವರಿ 9 ರಂದು ಗೃಹಪ್ರವೇಶ. ಆ ಸಂಭ್ರಮದಲ್ಲಿ ಮನೆಯ ಮೇಲೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಬೇಕು ಅನ್ನೋದು ಅವರ ಆಸೆ. ಕಳೆದ ಡಿಸೆಂಬರ್ 29 ರಂದು  ಡೆಕ್ಕನ್ ಚಾರ್ಟರ್ಸ್ ಹೆಲಿಕಾಪ್ಟರ್ ಬಾಡಿಗೆಗೆ ಪಡೆಯಲು ಮುನಿರಾಜು ತೆರಳಿದ್ದರು.

ಇದಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಅನುಮತಿ ಪಡೆಯುವಂತೆ ಅಲ್ಲಿ ಸೂಚಿಸಲಾಗಿದೆ. ಬಳಿಕ ಮರುದಿನವೇ ಮುನಿರಾಜು ಈ ಬಗ್ಗೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಇದುವರೆಗೂ ಅದಕ್ಕೆ ಪ್ರತಿಕ್ರಿಯೆ ಬಂದಿಲ್ಲವಂತೆ. ಈಗಾಗ್ಲೇ ಸ್ನೇಹಿತರು ಸಂಬಂಧಿಕರಿಗೆಲ್ಲ ಗೃಹಪ್ರವೇಶದ ಆಹ್ವಾನ ನೀಡಿರುವ ಮುನಿರಾಜು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡುವುದಾಗಿ ಹೇಳಿಕೊಂಡುಬಿಟ್ಟಿದ್ದಾರೆ. ಆದ್ರೆ ಇನ್ನೂ ಅನುಮತಿಯೇ ಸಿಕ್ಕಿಲ್ಲ.

ಇದರಿಂದ ತಮಗೆ ಅವಮಾನವಾಗುತ್ತದೆ ಅನ್ನೋದು ಮುನಿರಾಜು ವಾದ. ಕೇವಲ ಒಂದೂವರೆ ಗಂಟೆಗಳ ಕಾಲ ಹೆಲಿಕಾಪ್ಟರ್ ಬಳಸಿಕೊಳ್ಳಲಾಗುತ್ತದೆ, ಜೊತೆಗೆ ತಮ್ಮ ನೆರೆಮನೆಯವರಿಗೆ ಹೆಲಿಕಾಪ್ಟರ್ ಮೂಲಕ ಹೂಮಳೆ ಸುರಿಸಲು ಅನುಮತಿ ಸಿಕ್ಕಿತ್ತು, ನನಗೂ ಪರ್ಮಿಷನ್ ಕೊಡಿ ಅಂತಾ ಈತ ಕೋರ್ಟ್ ಗೆ ಮನವಿ ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...