alex Certify
ಕನ್ನಡ ದುನಿಯಾ       Mobile App
       

Kannada Duniya

ಆಸ್ತಿ ಜಗಳಕ್ಕೆ ಅಪ್ಪನ ಕಣ್ಣು ಗುಡ್ಡೆಗಳನ್ನೇ ಕಿತ್ತ ಮಗ

ಆಸ್ತಿ ಕಲಹದ ವಿಚಾರದಲ್ಲಿ ಪಾಪಿ ಪುತ್ರನೊಬ್ಬ ತಂದೆಯ ಕಣ್ಣನ್ನೇ ಕಿತ್ತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 65 ವರ್ಷದ ಪರಮೇಶ್ವರ್ ಎಂಬುವವರು ಪುತ್ರನ ಹೀನ ಕೃತ್ಯದಿಂದಾಗ ಶಾಶ್ವತ ದೃಷ್ಟಿ ಹೀನರಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಗಾಯಾಳು ಪರಮೇಶ್ವರ್ ಅವರು ಸದ್ಯ ಪ್ರಭಾ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತಂದೆಯ ಕಣ್ಣು ಕಿತ್ತಿರುವ ಮಗನನ್ನ ಪೊಲೀಸರು ಬಂಧಿಸಿದ್ದಾರೆ.

ಅಭಿಷೇಕ್ ಚೇತನ್ ಎಂಬಾತನೇ ಜನ್ಮದಾತನನ್ನು ಜೀವಮಾನವಿಡೀ ಕತ್ತಲೆಗೆ ದೂಡಿರುವ ಮಗ. ತನ್ನ ಹೆಸರಿಗೆ ಆಸ್ತಿಯನ್ನು ಬರೆಯುವಂತೆ ತಂದೆಯನ್ನು ಒತ್ತಾಯಿಸುತ್ತಿದ್ದ ಅಭಿಷೇಕ್ ಚೇತನ್. ಈ ವಿಚಾರವಾಗಿ ತಂದೆ-ಮಗನ ನಡುವೆ ಆಗಾಗ್ಗೆ ಜಗಳ ನಡೀತಾನೆ ಇತ್ತು,

ತಮ್ಮ ಆಸ್ತಿಯನ್ನು ಮೂವರು ಮಕ್ಕಳಿಗೆ ಸಮಪಾಲು ಮಾಡೋದಕ್ಕೆ ನಿರ್ಧರಿಸಿದ್ದ ಪರಮೇಶ್ವರ್ ಮನೆಯನ್ನು ಮಾತ್ರ ಪತ್ನಿ ಮತ್ತು ತಮ್ಮ ವಾಸಕ್ಕಾಗಿ ಅವರ ಬಳಿಯಲ್ಲೇ ಉಳಿಸಿಕೊಳ್ಳೋಕೆ ತೀರ್ಮಾನಿಸಿದ್ದರು. ಆದ್ರೆ ಕಳೆದ ತಿಂಗಳು ಪರಮೇಶ್ವರ್ ಅವರ ಪತ್ನಿ ಸಾವನ್ನಪ್ಪಿದ್ರು. ಆನಂತರದಲ್ಲಿ ಚೇತನ್ ತಂದೆಯನ್ನು ಆಸ್ತಿ ಕೊಡುವಂತೆ ಒತ್ತಾಯಿಸುತ್ತಿದ್ದ.

ಚೇತನ್ ಮಾದಕ ವಸ್ತು ವ್ಯಸನಿಯಾಗಿದ್ದ ಅಂತ ಹೇಳಲಾಗ್ತಿದೆ. ಮಂಗಳವಾರ ಮಧ್ಯಾಹ್ನ ಮನೆಗೆ ಬಂದ ಆತ ಮತ್ತೆ ಆಸ್ತಿ ತಗಾದೆ ತೆಗೆದಿದ್ದ. ಆನಂತರದಲ್ಲಿ ತನ್ನ ಕೈಗಳಿಂದಲೇ ತಂದೆಯ ಎರಡೂ ಕಣ್ಣುಗಳನ್ನು ಕಿತ್ತು ಹಾಕಿದ್ದಾನೆ. ಪರಮೇಶ್ವರ್ ಅವರ ಚೀರಾಟ ಕೇಳಿ ಬಂದ ಸ್ಥಳೀಯರು ಪಾಪಿ ಪುತ್ರನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...