alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವು ಕಚ್ಚಿ ಸತ್ತವನನ್ನು ಬದುಕಿಸಲು ಹೀಗೆ ಮಾಡಿದ್ರು…!

snakesalt-jpeg_30_09_201622 ವರ್ಷದ ಯುವಕ ರುದ್ರಪ್ಪ ಪಿಜೋಲಿ ಆಕಸ್ಮಿಕವಾಗಿ ಹಾವಿನ ಕಡಿತಕ್ಕೆ ಒಳಗಾಗಿದ್ದ. ಅವನು ಸತ್ತಿದ್ದಾನೆಂದು ವೈದ್ಯರು ಹೇಳಿದ ಬಳಿಕವೂ ಕುಟುಂಬದವರು ಅವನ ಮೈಮೇಲೆ ಉಪ್ಪನ್ನು ಹಾಕಿ ಅವನನ್ನು ಬದುಕಿಸುವ ಪ್ರಯತ್ನ ಮಾಡಿದ ವಿಚಿತ್ರ ಘಟನೆ ಖಾನಾಪುರದಲ್ಲಿ ನಡೆದಿದೆ.

ಹೊಲದಲ್ಲಿ ಕೆಲಸ ಮಾಡುತ್ತಿದ್ದ ರುದ್ರಪ್ಪನಿಗೆ ಬುಧವಾರ ಹಾವು ಕಚ್ಚಿತ್ತು. ಆದರೆ ರುದ್ರಪ್ಪನಿಗೆ ಇದರ ಬಗ್ಗೆ ಅರಿವಿರಲಿಲ್ಲ. ರಾತ್ರಿ ಮಲಗಿದ ಮೇಲೆ ಸುಮಾರು 2 ಗಂಟೆ ಸಮಯದಲ್ಲಿ ಆತನಿಗೆ ವಾಂತಿ ಆರಂಭವಾಯ್ತು. ನಂತರ ಕುಟುಂಬದವರು ಆತನನ್ನು ಆಸ್ಪತ್ರೆಗೆ ಕರೆದೊಯ್ದರು.

ರುದ್ರಪ್ಪನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದಾಗಿ ಹೇಳಿದರು. ವೈದ್ಯರ ಮಾತನ್ನು ನಂಬದ ರುದ್ರಪ್ಪನ ಕುಟುಂಬದವರು ಶವವನ್ನು ಪೋಸ್ಟ್ ಮಾರ್ಟಮ್ ಗೆ ಕೊಡಲಿಲ್ಲ. ನಂತರ ಸ್ಥಳೀಯ ಮಂತ್ರವಾದಿ ಹೇಳಿದಂತೆ ರುದ್ರಪ್ಪನ ಶವದ ಮೇಲೆ ಹಲವಾರು ಮೂಟೆ ಉಪ್ಪನ್ನು ಹಾಕಿದರು. ಹೀಗೆ ಉಪ್ಪನ್ನು ಹಾಕಿದ ಕೆಲ ಗಂಟೆಗಳಲ್ಲಿ ರುದ್ರಪ್ಪನ ಮೈಯಲ್ಲಿರುವ ವಿಷ ಹೊರ ಹೋಗಿ ಅವನಿಗೆ ಮತ್ತೆ ಜೀವ ಬರುತ್ತದೆ ಎಂಬುದು ಮಂತ್ರವಾದಿಯ ಮೊಂಡು ವಾದವಾಗಿತ್ತು. ಉಪ್ಪನ್ನು ಹಾಕಿ ಕೆಲ ಗಂಟೆಗಳಾದರೂ ರುದ್ರಪ್ಪನಿಗೆ ಜೀವ ಬರದಿದ್ದಾಗ ಕುಟುಂಬದವರು ಶವವನ್ನು ಪೋಸ್ಟ್ ಮಾರ್ಟಮ್ ಗೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...