alex Certify
ಕನ್ನಡ ದುನಿಯಾ       Mobile App
       

Kannada Duniya

ಮೆಟ್ರೋದಲ್ಲಿ ಮಹಿಳೆಗೆ ಅಂಟಿ ನಿಂತವನ ಖಾಸಗಿ ಅಂಗ…!

ಮಹಿಳೆಯರಿಗೆ ಅತ್ಯಂತ ಸುರಕ್ಷಿತ ಸಾರಿಗೆ ಎಂದು ಹೆಸರಾಗಿದ್ದ ಮೆಟ್ರೋದಲ್ಲಿ ಕಿರುಕುಳ ಜಾಸ್ತಿಯಾಗ್ತಿದೆ. ನಮ್ಮ ಮೆಟ್ರೋದಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣ ಬೆಳಕಿಗೆ ಬಂದಿದೆ. ಮೆಟ್ರೋದಲ್ಲಿ ಯುವತಿಗೆ ಅಂಟಿಕೊಂಡು ನಿಂತಿದ್ದ ಕಾಮುಕನ ಪ್ಯಾಂಟ್ ಜಿಪ್ ಬಿಚ್ಚಿತ್ತು ಎನ್ನಲಾಗಿದೆ.

ಘಟನೆ ರಾಜಾಜಿನಗರದಿಂದ ಬನಶಂಕರಿಗೆ ಹೋಗುವ ಮೆಟ್ರೋದಲ್ಲಿ ನಡೆದಿದೆ. ಸಂಜೆ ಸುಮಾರು 5 ಗಂಟೆ ವೇಳೆಗೆ 30 ವರ್ಷದ ಮಹಿಳೆ ಮೆಟ್ರೋ ಹತ್ತಿದ್ದಾಳೆ. ಮಹಿಳೆಯನ್ನು ಅಂಟಿ ನಿಂತಿದ್ದ ಆರೋಪಿ ನಿಧಾನವಾಗಿ ಕಿರುಕುಳ ನೀಡಲು ಶುರು ಮಾಡಿದ್ದಾನೆ. ಮೆಜೆಸ್ಟಿಕ್ ಬರ್ತಿದ್ದಂತೆ ಕಿರುಕುಳ ಹೆಚ್ಚಾಗಿದೆ. ಈ ಬಗ್ಗೆ ಮಹಿಳೆ ಒಮ್ಮೆ ವಾರ್ನ್ ಮಾಡಿದ್ದಾಳೆ ಎನ್ನಲಾಗಿದೆ.

ಮೆಟ್ರೋ ರೈಲು ಜಯನಗರ ತಲುಪುತ್ತಿದ್ದಂತೆ ಕಿರುಕುಳ ಜಾಸ್ತಿಯಾಗಿದೆ. ಮಹಿಳೆ ಹಿಂತಿರುಗಿ ನೋಡಿದ್ದಾಳೆ. ಆರೋಪಿ ವರ್ತನೆ ಆಕೆಯನ್ನು ದಂಗಾಗಿಸಿದೆ. ಆತನ ಪ್ಯಾಂಟ್ ಜಿಪ್ ತೆಗೆದಿದ್ದು, ಖಾಸಗಿ ಅಂಗ ಹೊರಗೆ ಬಂದಿತ್ತು ಎನ್ನಲಾಗಿದೆ. ಇದನ್ನು ನೋಡಿದ ಮಹಿಳೆ ಕೂಗಿಕೊಂಡಿದ್ದಾಳೆ.

ಮಹಿಳೆ ಕೂಗುತ್ತಿದ್ದಂತೆ ಪ್ರಯಾಣಿಕರು ನೆರವಿಗೆ ಬಂದಿದ್ದಾರೆ. ಆರೋಪಿಯನ್ನು ರೈಲಿನಿಂದ ಇಳಿಸಿ ಥಳಿಸಿದ್ದಾರೆ. ನಂತ್ರ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...