alex Certify
ಕನ್ನಡ ದುನಿಯಾ       Mobile App
       

Kannada Duniya

4000 ಕೋಟಿ ಕೊಡ್ತೀನಿ ಅಂತಿರೋ ಮಲ್ಯ ಬಾಕಿ ಮೊತ್ತದ ಕುರಿತು ಮಾತೇ ಆಡ್ತಿಲ್ಲ

mallya_0234ಭಾರತದ ವಿವಿಧ ಬ್ಯಾಂಕ್ ಗಳಿಂದ ಬರೋಬ್ಬರಿ 9 ಸಾವಿರ ಕೋಟಿ ರೂ. ಸಾಲ ಎತ್ತಿ ಇದೀಗ ಶಿಸ್ತಾಗಿ ವಿದೇಶದಲ್ಲಿ ಹೋಗಿ ಕುಳಿತಿರುವ ವಿಜಯ್ ಮಲ್ಯ ಹೊಸದೊಂದು ಪ್ರಪೋಸಲ್ ಮುಂದಿಟ್ಟಿದ್ದಾರೆಂದು ಹೇಳಲಾಗಿದ್ದು, ಈ ವರ್ಷದ ಸೆಪ್ಟೆಂಬರ್ ಒಳಗಾಗಿ 4 ಸಾವಿರ ಕೋಟಿ ರೂ. ಸಾಲ ತೀರಿಸುವುದಾಗಿ ತಿಳಿಸಿದ್ದಾರೆನ್ನಲಾಗಿದೆ. ಆದರೆ ಬಾಕಿ ಉಳಿಯುವ 5 ಸಾವಿರ ಕೋಟಿ ರೂ. ಸಾಲದ ಕುರಿತು ಮಲ್ಯ ಯಾವುದೇ ಮಾತನಾಡಿಲ್ಲವೆನ್ನಲಾಗಿದೆ.

ಕಿಂಗ್ ಫಿಶರ್ ಏರ್ಲೈನ್ಸ್ ಹೆಸರಿನಲ್ಲಿ ಸಾಲ ಪಡೆದಿದ್ದ ಮಲ್ಯ ಈ ಹಣವನ್ನು ತಮ್ಮ ಇತರೆ ಉದ್ಯಮಗಳಿಗೆ ಬಳಸಿಕೊಂಡಿದ್ದರು. ಅದ್ದೂರಿಯಾಗಿ ಆರಂಭವಾಗಿದ್ದ ಕಿಂಗ್ ಫಿಶರ್ ಏರ್ಲೈನ್ಸ್ ಮಕಾಡೆ ಮಲಗಿದ ಕಾರಣ, ಸಾಲ ಕೊಟ್ಟ ಬ್ಯಾಂಕುಗಳು ವಸೂಲಾತಿಗಾಗಿ ಮಲ್ಯರ ಹಿಂದೆ ಬಿದ್ದವು. ಈ ವೇಳೆ ಸದ್ದಿಲ್ಲದೇ ವಿದೇಶಕ್ಕೆ ಹಾರಿ ಹೋದ ಮಲ್ಯ, ಅಲ್ಲಿಂದಲೇ ಉತ್ತರ ನೀಡುತ್ತಿದ್ದಾರೆ.

ಸಾಳ ವಸೂಲಾತಿಗಾಗಿ ಮಲ್ಯರ ವಿರುದ್ದ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಈ ಮಧ್ಯೆ ಮುಂಬೈನ ಕಿಂಗ್ ಫಿಶರ್ ಹೌಸ್ ಗೆ 150 ಕೋಟಿ ರೂ. ಮೂಲ ಬೆಲೆ ನಿಗದಿಪಡಿಸಿ ಹರಾಜು ಮಾಡಲು ಮುಂದಾದರೂ ಕೊಳ್ಳುವವರು ಯಾರೂ ಮುಂದೆ ಬರಲಿಲ್ಲ. ಇದೀಗ ಮಲ್ಯ ಮುಂದಿಟ್ಟಿರುವ ಪ್ರಪೋಸಲ್ ಗೆ ಬ್ಯಾಂಕುಗಳು ಯಾವ ನಿರ್ಧಾರ ಕೈಗೊಳ್ಳುತ್ತವೆಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...