alex Certify
ಕನ್ನಡ ದುನಿಯಾ       Mobile App
       

Kannada Duniya

ನಂಬರ್ ಗೇಮ್ ನಲ್ಲಿ ಗೆಲ್ಲೋಕೆ ಏನು ಮಾಡ್ಬೇಕು ಗೊತ್ತಾ?

ನಾಳೆ ವಿಧಾನಸಭೆಯಲ್ಲಿ ಏನಾಗುತ್ತೆ? ಬಹುಮತ ಸಾಬೀತಿಗೆ ಬಿಜೆಪಿ ನಾಯಕರು ಏನು ಮಾಡ್ತಾರೆ? ನಂಬರ್ ಗೇಮ್ ಜೊತೆ ಹೇಗೆ ಆಟವಾಡ್ತಾರೆ? ಈ ಎಲ್ಲ ಪ್ರಶ್ನೆಗಳು ಸದ್ಯ ಎಲ್ಲರನ್ನು ಕಾಡ್ತಿವೆ. ತಜ್ಞರ ಪ್ರಕಾರ ಸಿಎಂ ಆಗಿ ಯಡಿಯೂರಪ್ಪ ಮುಂದುವರೆಯುವ ಸಾಧ್ಯತೆಯಿದೆ. ಆದ್ರೆ ಸಿಎಂ ಆಗಿ ಮುಂದುವರೆಯಬೇಕಾದ್ರೆ ಕೆಲವೊಂದು ಮ್ಯಾಜಿಕ್ ನಡೆಯಬೇಕು.

ಬಹುಮತ ಸಾಬೀತು ವೇಳೆ ಕ್ರಾಸ್ ವೋಟ್ ನಡೆದ್ರೆ ಬಿಜೆಪಿ ಬಹುಮತ ಸಾಬೀತುಪಡಿಸಲು ಸಾಧ್ಯವಾಗುತ್ತದೆ. ಇನ್ನೊಂದು ಬಿಜೆಪಿ ವಿಧಾನಸಭೆ ಸದಸ್ಯರ ಸಂಖ್ಯೆಯನ್ನು 207ಕ್ಕೆ ಇಳಿಸೋದು. ಯಸ್. ಜೆಡಿಎಸ್-ಕಾಂಗ್ರೆಸ್ ಸಂಖ್ಯಾಬಲ 117 ಇದೆ. ಅದ್ರಲ್ಲಿ 14 ಶಾಸಕರು ಗೈರಾಗುವಂತೆ ಬಿಜೆಪಿ ನೋಡಿಕೊಳ್ಳಬೇಕು. ಆಗ ಸಂಖ್ಯಾಬಲ 103 ಕ್ಕೆ ಇಳಿಯುತ್ತದೆ. ಅಂದ್ರೆ ಜೆಡಿಎಸ್-ಕಾಂಗ್ರೆಸ್ ಗಿಂತ ಬಿಜೆಪಿಗೆ 1 ಮತದ ಮುನ್ನಡೆ ಸಿಗಲಿದೆ. ಆಗ ಯಡಿಯೂರಪ್ಪ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಲಿದ್ದಾರೆ.

ಇದ್ರ ಜೊತೆಗೆ ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ಮನವೊಲಿಸಿ ಸದನದಲ್ಲಿಯೇ ಬಿಜೆಪಿ ಪರ ಮತ ಹಾಕಿಸಬಹುದು. ಬಿಜೆಪಿಗೆ ಲಿಂಗಾಯತ ಶಾಸಕರ ಬೆಂಬಲ ಸಿಗುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ನಾಳೆ ಬೆಳಿಗ್ಗೆಯವರೆಗೆ ಕಾಂಗ್ರೆಸ್-ಜೆಡಿಎಸ್ ಜೊತೆಗಿದ್ದು ಕಲಾಪದಲ್ಲಿ ಲಿಂಗಾಯಿತ ಶಾಸಕರು ಪಕ್ಷ ಬದಲಿಸುವ ಸಂಭವವಿದೆ. ಅವ್ರ ಮನವೊಲಿಕೆಗೆ ನಿರಂತರ ಯತ್ನ ನಡೆಯುತ್ತಿದೆ. ಆದ್ರೆ ಇದೆಲ್ಲವೂ ತುಂಬಾ ಕಷ್ಟ ಎನ್ನುತ್ತಿದೆ ಮತ್ತೊಂದು ಮೂಲಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...