alex Certify
ಕನ್ನಡ ದುನಿಯಾ       Mobile App
       

Kannada Duniya

1 ರೂ. ಚಿಲ್ಲರೆಗಾಗಿ ಏನಾಯ್ತು ಗೊತ್ತಾ..?

MAJE 45

ಬೆಂಗಳೂರು: ಒಂದೇ ಒಂದು ರೂಪಾಯಿ ಚಿಲ್ಲರೆಗಾಗಿ ಕಂಡಕ್ಟರ್ ನನ್ನು ಅವಾಚ್ಯ ಪದಗಳಿಂದ ನಿಂದಿಸಿದ ವ್ಯಕ್ತಿಯೊಬ್ಬನನ್ನು ಪ್ರಯಾಣಿಕರೇ ಥಳಿಸಿದ ಘಟನೆ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ನಡೆದಿದೆ.

ತುಮಕೂರಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಲ್ಲಿ ಬೆಂಗಳೂರಿಗೆ ಬಂದ ಪ್ರಯಾಣಿಕನೊಬ್ಬ, 1 ರೂ. ಚಿಲ್ಲರೆ ಕೊಡುವಂತೆ ಬಸ್ ಕಂಡಕ್ಟರ್ ಗೆ ಕೇಳಿದ್ದಾನೆ. ತನ್ನ ಬಳಿ 1 ರೂ. ಇಲ್ಲದ ಕಾರಣ, ಮೆಜೆಸ್ಟಿಕ್ ನಲ್ಲಿ ಕೊಡುವುದಾಗಿ ಕಂಡಕ್ಟರ್ ಹೇಳಿದ್ದು, ಮೆಜೆಸ್ಟಿಕ್ ಗೆ ಬಂದ ಪ್ರಯಾಣಿಕ, ಎಲ್ಲರ ಎದುರಿನಲ್ಲೇ ಚಿಲ್ಲರೆ ಕೊಟ್ಟಿಲ್ಲ ಎಂದು ಅವಾಚ್ಯ ಪದಗಳಿಂದ ಕಂಡಕ್ಟರ್ ನನ್ನು ನಿಂದಿಸಿದ್ದಾನೆ. ಇದನ್ನು ಕೇಳಲು ಬಂದ ಸಹ ಪ್ರಯಾಣಿಕರ ಮೇಲೆಯೂ ರೇಗಾಡಿ ಬೈದಿದ್ದಾನೆ ಎನ್ನಲಾಗಿದೆ.

ಈತನ ವರ್ತನೆಯಿಂದ ಬೇಸತ್ತ ಸಾರ್ವಜನಿಕರೇ ಹಿಡಿದು ಥಳಿಸಿದ್ದಾರೆ. ತುಮಕೂರಿನ ವ್ಯಕ್ತಿ 1 ರೂಪಾಯಿ ಚಿಲ್ಲರೆಗಾಗಿ ಪ್ರಯಾಣಿಕರು, ಕಂಡಕ್ಟರ್ ನನ್ನು ಅವಾಚ್ಯವಾಗಿ ಬೈದಾಡಿದ್ದಾನೆ. ಚಿಲ್ಲರೆ ಕೊಡುತ್ತೇನೆ ಎಂದು ಹೇಳಿದರೂ ಕೇಳದೇ ಕೆಟ್ಟ ಭಾಷೆಯಲ್ಲಿ ಬೈದಾಡಿದ್ದಾನೆ. ಕೊನೆಗೆ ಇತರೆ ಪ್ರಯಾಣಿಕರ ಹೊಡೆತ ತಾಳಲಾರದೆ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...