alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಾದಾಯಿ ಹೋರಾಟಗಾರನ ಹತ್ಯೆಗೆ ಯತ್ನ

gadag-nargund

ಗದಗ: ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ತಡರಾತ್ರಿ ಮಹಾದಾಯಿ ಹೋರಾಟಗಾರನ ಕೊಲೆಗೆ ಯತ್ನಿಸಲಾಗಿದೆ.

ಕಳಸಾ –ಬಂಡೂರಿ ಯೋಜನೆ ಹೋರಾಟಗಾರ ಹಾಗೂ ವ್ಯಾಪಾರಿ ಅಂದಾನಗೌಡ ಪಾಟೀಲ್ ಅವರ ಮೇಲೆ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.

ನರಗುಂದ ಎ.ಪಿ.ಎಂ.ಸಿ. ಬಳಿ ಇರುವ ಪಾಟೀಲರ ಮನೆಯ ಬಾಗಿಲು ಬಡಿದ ಮೂವರು ದುಷ್ಕರ್ಮಿಗಳು, ಕಣ್ಣಿಗೆ ಖಾರದ ಪುಡಿ ಎರಚಿ ಕೊಲೆ ಮಾಡಲು ಯತ್ನಿಸಿದ್ದು, ಅಂದಾನಗೌಡ ಪಾಟೀಲರು ಜೋರಾಗಿ ಕಿರುಚಿದಾಗ ಅಲ್ಲಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ನರಗುಂದ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...