alex Certify
ಕನ್ನಡ ದುನಿಯಾ       Mobile App
       

Kannada Duniya

ಶಿವನ ದರ್ಶನ ಪಡೆದು ಪುನೀತರಾದ ಭಕ್ತರು

ದೇಶಾದ್ಯಂತ ಶಿವರಾತ್ರಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಶಿವರಾತ್ರಿಯಂದು ಶಿವನ ಆರಾಧನೆ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇರುವುದರಿಂದ ಶಿವನ ದೇವಾಲಯಗಳಲ್ಲಿ ಭಕ್ತರ ದಂಡು ಹರಿದು ಬಂದಿದೆ.

ಬೆಂಗಳೂರು, ಧರ್ಮಸ್ಥಳ, ಗೋಕರ್ಣ, ಮುರ್ಡೇಶ್ವರ ಮೊದಲಾದ ದೇವಾಲಯಗಳಲ್ಲಿ ಅಪಾರ ಸಂಖ್ಯೆಯ ಭಕ್ತರು ದೇವರ ದರ್ಶನ ಪಡೆದುಕೊಂಡಿದ್ದಾರೆ. ಅನೇಕ ದೇವಾಲಯಗಳಲ್ಲಿ ದೇವರ ದರ್ಶನಕ್ಕೆ ಭಾರೀ ಸಂಖ್ಯೆಯ ಭಕ್ತರು ಆಗಮಿಸಿದ ಕಾರಣ ನಿಯಂತ್ರಿಸಲು ಹರಸಾಹಸ ಪಡುವಂತಾಗಿದೆ.

ಶಿವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಪೂಜೆ ನೆರವೇರಿಸಲಾಗಿದ್ದು, ಹೂವಿನ ಅಲಂಕಾರ, ಅಭಿಷೇಕ, ರುದ್ರಾಭಿಷೇಕ ನಡೆಸಲಾಗಿದ್ದು, ಭಕ್ತರು ಕಣ್ತುಂಬಿಕೊಂಡು ಪುನೀತರಾಗಿದ್ದಾರೆ.

ಇನ್ನು ಶಿವರಾತ್ರಿಯಂದು ಶಿವನ ಭಕ್ತರು ಉಪವಾಸ ವ್ರತವನ್ನಾಚರಿಸುತ್ತಾರೆ. ಹಣ್ಣು ಮೊದಲಾದವುಗಳನ್ನು ಮಾತ್ರ ಸೇವಿಸುತ್ತಾರೆ. ಕಠಿಣ ವ್ರತವನ್ನು ಆಚರಿಸುವ ಭಕ್ತರು ಕೂಡ ಇದ್ದು, ಕೆಲವರು ನೀರು ಹೊರತಾಗಿ ಏನನ್ನೂ ಸೇವಿಸುವುದಿಲ್ಲ. ಉಪವಾಸವಿದ್ದು, ದೇವರ ದರ್ಶನ ಮಾಡಿದರೆ ಒಳಿತಾಗುತ್ತದೆ ಎಂಬ ನಂಬಿಕೆ ಇದೆ.

Subscribe Newsletter

Get latest updates on your inbox...

Opinion Poll

  • ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಚುನಾವಣಾ ಗಿಮಿಕ್...?

    View Results

    Loading ... Loading ...