alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಮುಸ್ಲಿಂ ಕಾಳಿ ಮಾತೆ ಅವತಾರ

ಮಡಿಕೇರಿ: ಕೆಂಪು ಸೀರೆ ಧರಿಸಿ, ಕೈಯಲ್ಲಿ ತ್ರಿಶೂಲ ಹಿಡಿದು ನಾಲಿಗೆಯನ್ನು ಚಾಚುತ್ತಾ ಮಹಿಳೆಯೊಬ್ಬರು ನನ್ನ ಮೇಲೆ ಕಾಳಿ ಮಾತೆ ಅವಾಹನೆಯಾಗಿರುವುದಾಗಿ ಹೇಳಿದ ವಿಚಿತ್ರ ಘಟನೆ ಕುಶಾಲನಗರದಲ್ಲಿ ನಡೆದಿದೆ.

ಬ್ರಿಲಿಯಂಟ್ ಬ್ಲೂಮ್ ಶಾಲೆಯ ಮುಖ್ಯ ಶಿಕ್ಷಕಿ ಮುಬಿನಾ ತಾಜ್ ಹೀಗೆ ವರ್ತಿಸಿದ ಮಹಿಳೆ. ಪಟ್ಟಣ ಪಂಚಾಯಿತಿ ಬಳಿ ಹೈಡ್ರಾಮಾ ನಡೆಸಿದ ಮುಬಿನಾ, ಕಾಳಿ ಮಾತೆ ಅವಾಹನೆಯಾದಂತೆ ನಟಿಸಿ, ಈ ಸ್ಥಳದಲ್ಲಿ 7 ಅಡಿ ಆಳದಲ್ಲಿ ಕಾಳಿಮಾತೆಯ ವಿಗ್ರಹವಿದೆ. ನೆಲವನ್ನು ಅಗೆದು ವಿಗ್ರಹವನ್ನು ಮೇಲಕ್ಕೆ ತನ್ನಿ ಎಂದೆಲ್ಲಾ ಹೇಳಿದ್ದಾರೆ.

ಮುಬಿನಾ ತಾಜ್ ವಿಚಿತ್ರ ವರ್ತನೆಯ ಬಗ್ಗೆ ಮಾಹಿತಿ ತಿಳಿದ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದು, ಬಳಿಕ ಎಚ್ಚರಿಕೆ ನೀಡಿ ಕಳಿಸಿದ್ದಾರೆ.

ಮುಬಿನಾ ಹಿಂದೆ ಇದೇ ಸ್ಥಳದಲ್ಲಿ ಶಾಲೆ ನಡೆಸುತ್ತಿದ್ದರು. ಆ ಜಾಗ ಬೇರೆಯವರ ಪಾಲಾಗಿದ್ದರಿಂದ ಅದನ್ನು ಪಡೆಯಲು ಎಲ್ಲಾ ರೀತಿಯ ಪ್ರಯತ್ನ ನಡೆಸಿ ವಿಫಲವಾಗಿ, ಕಾಳಿ ಮಾತೆ ಅವತಾರ ತಾಳಿದ್ದಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...