alex Certify
ಕನ್ನಡ ದುನಿಯಾ       Mobile App
       

Kannada Duniya

ತಾವೇ ಹಾಕಿದ್ದ ಉರುಳಿಗೆ ಸಿಕ್ಕಿಬಿದ್ದ ಬೇಟೆಗಾರರು

arest-madi

ಮಡಿಕೇರಿ: ಉರುಳು ಹಾಕಿ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ 5 ಮಂದಿಯನ್ನು, ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ಬಸವ, ಕುಟ್ಟ, ಮುತ್ತ, ಕಾವಲ, ಚುಬ್ರ ಬಂಧಿತ ಆರೋಪಿಗಳು. ಕಾಡು ಹಾಗೂ ಕಾಫಿ ತೋಟಗಳಲ್ಲಿ ಉರುಳು ಹಾಕಿ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು.

ಕಾಡು ಹಂದಿ, ಜಿಂಕೆ ಹಿಡಿಯಲು ಹಾಕಿದ್ದ ಉರುಳಿಗೆ ಇತ್ತೀಚೆಗಷ್ಟೇ 2 ಹುಲಿಗಳು ಸಿಲುಕಿ ಸಾವು ಕಂಡಿದ್ದವು.

ಅದಾದ ನಂತರ ಅರಣ್ಯ ಇಲಾಖೆ ವತಿಯಿಂದ ಈ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ, ಸುಮಾರು 600 ಉರುಳುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಾಣಿಗಳು ನೀರು ಕುಡಿಯಲು ಬರುತ್ತಿದ್ದ ಜಾಗಗಳಲ್ಲಿ ಆರೋಪಿಗಳು ಉರುಳು ಹಾಕುತ್ತಿದ್ದರು.

ಅರಣ್ಯ ಇಲಾಖೆ ಸಿಬ್ಬಂದಿ ಗಸ್ತಿನಲ್ಲಿದ್ದ ಸಂದರ್ಭದಲ್ಲಿ ಐವರೂ ಆರೋಪಿಗಳು, ತಾವು ಹಾಕಿದ್ದ ಉರುಳು ವೀಕ್ಷಿಸಲು ಬಂದಿದ್ದಾರೆ. ಅವರನ್ನು ಸುತ್ತುವರೆದು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...