alex Certify
ಕನ್ನಡ ದುನಿಯಾ       Mobile App
       

Kannada Duniya

ಸಂಗಾತಿಯನ್ನು ಸೇರುವಾಗಲೇ ಬಂದೆರಗಿತ್ತು ಸಾವು

ane-d

ಮಡಿಕೇರಿ: ಪ್ರೀತಿ, ಪ್ರೇಮ ಎಂದು ಮಾನವರು ಬಡಿದಾಡಿಕೊಳ್ಳುವುದು ಸಹಜ. ಹೆಣ್ಣಿಗಾಗಿ ಕೊಲೆಗಳೇ ನಡೆದಿವೆ. ಪ್ರಾಣಿ ಪ್ರಪಂಚದಲ್ಲಿಯೂ ಹೆಣ್ಣಿಗಾಗಿ ಕೊಲೆಗಳು ನಡೆಯುತ್ತವೆ. ಅಂತಹ ಒಂದು ಪ್ರಕರಣದ ಸ್ಟೋರಿ ಇಲ್ಲಿದೆ ನೋಡಿ.

ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲ್ಲೂಕಿನ ವಡ್ಡರಕಾಡು ಸಮೀಪದ ಕಾಫಿ ತೋಟವೊಂದರಲ್ಲಿ ಆನೆಗಳ ಹಿಂಡು ಬೀಡು ಬಿಟ್ಟಿದೆ.

ಹಿಂಡಿನಲ್ಲಿದ್ದ ಬಲಶಾಲಿ ಆನೆಯೊಂದು ತನ್ನ ಸಂಗಾತಿಯನ್ನು ಸೇರುವ ಸಂದರ್ಭದಲ್ಲಿ ಮತ್ತೊಂದು ಕಾಡಾನೆ ಎದುರಾಗಿದೆ. ಅದು ಕೂಡ ಹೆಣ್ಣಾನೆಯೊಂದಿಗೆ ಸರಸಕ್ಕೆ ಮುಂದಾಗಿದೆ.

ಇದರಿಂದಾಗಿ ಎರಡೂ ಮದಗಜಗಳ ನಡುವೆ ಭಾರೀ ಕಾಳಗವೇ ನಡೆದಿದೆ. ಬಲಶಾಲಿಯಾಗಿದ್ದ ಕಾಡಾನೆಗಳು ಬಹು ಹೊತ್ತಿನವರೆಗೂ ಕಾದಾಡಿವೆ. ಅದರಲ್ಲಿ 28 ವರ್ಷದ ಆನೆ ಸೋತು ಕೆಳಕ್ಕೆ ಉರುಳಿದೆ. ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಆನೆಗೆ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಾಗಿಲ್ಲ. ಕೊನೆಗೆ ಅಲ್ಲೇ ಪ್ರಾಣ ಬಿಟ್ಟಿದೆ. ಮತ್ತೊಂದು ಆನೆ ತನ್ನ ಪರಿವಾರದೊಂದಿಗೆ ಕಾಡಿನೊಳಗೆ ಪ್ರವೇಶಿಸಿದೆ.

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...