alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಹಣ ವೀಕ್ಷಣೆಗೆ ಮುಗಿಬಿದ್ದ ಜನ, ಆದರೂ ಹಲವೆಡೆ ಬಂದ್ ವಾತಾವರಣ

ಬಾನಂಗಳದಲ್ಲಿ ಚಂದ್ರಗ್ರಹಣ ಗೋಚರದ ಸಮಯ ಆರಂಭವಾಗುತ್ತಿದ್ದಂತೆ, ಹೆಚ್ಚಿನ ಜನ ಮನೆ ಸೇರಿಕೊಂಡಿದ್ದಾರೆ. ಮತ್ತೆ ಕೆಲವು ಕಡೆಗಳಲ್ಲಿ ಬಾನಂಗಳದಲ್ಲಿ ನಡೆಯುವ ಕೌತುಕವನ್ನು ಕಣ್ತುಂಬಿಕೊಳ್ಳಲು ಜನ ಕಾತರರಾಗಿದ್ದಾರೆ.

ಗ್ರಹಣದ ಕಾರಣ ಅನೇಕ ದೇವಾಲಯಗಳು ಬಂದ್ ಆಗಿದ್ದು, ಪೂಜೆ ಪುನಸ್ಕಾರಗಳನ್ನು ನಿಲ್ಲಿಸಲಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಅನೇಕ ದೇವಾಲಯಗಳಲ್ಲಿ ವಿಶೇಷ ಪೂಜೆ, ಮತ್ತೆ ಕೆಲವು ಕಡೆ ಗ್ರಹಣ ದೋಷ ಪೂಜೆ ನಡೆಸಲಾಗಿದೆ.

ಒಂದೇ ತಿಂಗಳಲ್ಲಿ 2 ನೇ ಗ್ರಹಣ ಬಂದಿರುವುದರಿಂದ ಸೂಪರ್ ಮೂನ್ ಎಂದು ಕರೆಯಲಾಗಿದೆ. ಬ್ಲಡ್ ಮೂನ್, ಬ್ಲ್ಯೂ ಮೂನ್ ಆಗಿಯೂ ಚಂದ್ರ ಗೋಚರಿಸಲಿದ್ದು, ಪ್ರಕೃತಿಯಲ್ಲಿ ಈ ವಿದ್ಯಮಾನವನ್ನು ಕಣ್ತುಂಬಿಕೊಳ್ಳಲು ಆಸಕ್ತರು ಕುತೂಹಲದಿಂದ ಕಾಯುತ್ತಿದ್ದಾರೆ. ಗ್ರಹಣದ ವೇಳೆ ಏನೆಲ್ಲಾ ಪರಿಣಾಮಗಳಾಗಬಹುದೆಂಬುದರ ಕುರಿತಾಗಿಯೂ ಕುತೂಹಲ ಹೆಚ್ಚಿದೆ. ಹಲವು ಕಡೆಗಳಲ್ಲಿ ಟೆಲಿಸ್ಕೋಪ್ ಮೂಲಕ ಗ್ರಹಣ ವ್ಯವಸ್ಥೆ ಮಾಡಲಾಗಿದ್ದು, ವೀಕ್ಷಣೆಗೆ ಜನ ಮುಗಿಬಿದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...