alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೀತಿಸಿದವನ ಜೊತೆ ಬಾಳಲು ಬಿಡುವಂತೆ ಪಿಯುಸಿ ವಿದ್ಯಾರ್ಥಿನಿಯ ರಂಪಾಟ

ಆಟೋ ಚಾಲಕನೊಂದಿಗೆ ಪ್ರೀತಿಗೆ ಬಿದ್ದಿದ್ದ ಪಿಯುಸಿ ವಿದ್ಯಾರ್ಥಿನಿಯೊಬ್ಬಳು ಆತನ ಮನೆಗೆ ತೆರಳಿದ್ದು, ಪೋಷಕರು ಕರೆದೊಯ್ಯಲು ಬಂದ ವೇಳೆ ರಂಪಾಟ ನಡೆಸಿರುವ ಘಟನೆ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ವಿದುರಾಶ್ವತ ಆಟೋ ಚಾಲಕ ಬಾಬು ಎಂಬಾತನನ್ನು ಈ ವಿದ್ಯಾರ್ಥಿನಿ ಕಳೆದ ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದಳೆಂದು ಹೇಳಲಾಗಿದ್ದು, ಆತನೊಂದಿಗೆ ಬಾಳು ನಡೆಸುವ ಸಲುವಾಗಿ ಪ್ರೇಮಿಯ ಮನೆಗೆ ಬಂದಿದ್ದಳು.

ಇದನ್ನು ತಿಳಿದ ಪೋಷಕರು ವಾಪಾಸ್ ಮನೆಗೆ ಕರೆದೊಯ್ಯಲು ಬಂದಿದ್ದು, ಈ ವೇಳೆ ಪ್ರೀತಿಸಿದವನೊಂದಿಗೆ ಇರುವುದಾಗಿ ವಿದ್ಯಾರ್ಥಿನಿ ಪಟ್ಟು ಹಿಡಿದಿದ್ದಾಳೆ.

ಪೋಷಕರು ಬಲವಂತವಾಗಿ ಕರೆದೊಯ್ಯಲು ಮುಂದಾದಾಗ ರಂಪಾಟ ನಡೆಸಿದ ವಿದ್ಯಾರ್ಥಿನಿ, ಯಾವುದೇ ಕಾರಣಕ್ಕೂ ನಾನು ಬರುವುದಿಲ್ಲವೆಂದು ಹೇಳಿದ್ದಾಳೆ. ಕಡೆಗೆ ಹೇಗೋ ಆಕೆಯ ಮನವೊಲಿಸಿದ ಪೋಷಕರು ಮನೆಗೆ ಕರೆದುಕೊಂಡು ಹೋಗಿದ್ದು, ವಿದ್ಯಾರ್ಥಿನಿಯ ರಂಪಾಟದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...