alex Certify
ಕನ್ನಡ ದುನಿಯಾ       Mobile App
       

Kannada Duniya

ಮಗಳ ಮೇಲೆ ಕಣ್ಣಾಕ್ಕಿದ್ದಕ್ಕೆ ತಾಯಿ ಕೊಟ್ಟಿದ್ದು ಸುಪಾರಿ

ಶಿವಮೊಗ್ಗ: ಪ್ರೀತಿಯ ವಿಚಾರಕ್ಕೆ ಯುವಕ ಮತ್ತು ಆತನ ಕುಟುಂಬದವರು, ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಹೊರ ವಲಯದ ಗೋವಿಂದಾಪುರದಲ್ಲಿ ನಡೆದಿದೆ.

ರವಿ ಎಂಬಾತ ಗೋಪಾಳ ಬಡಾವಣೆ ನಿವಾಸಿಯಾಗಿರುವ ಯುವತಿಯನ್ನು ಪ್ರೀತಿಸಿದ್ದ. ಆಕೆಯನ್ನು ಮದುವೆಯಾಗಲು ಮುಂದಾಗಿದ್ದ. ಇದಕ್ಕೆ ಆಕ್ರೋಶಗೊಂಡ ಯುವತಿಯ ತಾಯಿ, ರವಿಯ ಮೇಲೆ ಹಲ್ಲೆಗೆ ಸುಪಾರಿ ಕೊಟ್ಟಿದ್ದಾಳೆ.

ರಾತ್ರಿ ರವಿ ಮನೆಯಲ್ಲಿದ್ದ ಸಂದರ್ಭದಲ್ಲಿ 12 ಮಂದಿ ದುಷ್ಕರ್ಮಿಗಳು ದಾಳಿ ಮಾಡಿದ್ದು, ಅವರ ಕುಟುಂಬದವರು ಸ್ನೇಹಿತರ ಮೇಲೆ ಹಲ್ಲೆ ಮಾಡಿದ್ದಾರೆ. ತಡೆಯಲು ಬಂದ ನಿತಿನ್ ಎಂಬುವವರಿಗೆ ಚಾಕುವಿನಿಂದ ಇರಿದಿದ್ದಾರೆ.

ಘಟನೆಯಲ್ಲಿ ಐವರು ಗಾಯಗೊಂಡಿದ್ದು, ಅವರಲ್ಲಿ ನಿತಿನ್ ಸ್ಥಿತಿ ಗಂಭೀರವಾಗಿದೆ. ಎಸ್.ಪಿ. ಅಭಿನವ್ ಖರೆ ಪರಿಶೀಲನೆ ನಡೆಸಿದ್ದಾರೆ. ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...