alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ

ಬೆಂಗಳೂರು: ರಾಜ್ಯದಲ್ಲಿ ಮತ್ತೊಂದು ಮರ್ಯಾದೆಗೇಡು ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ತ್ಯಾಮಗೊಂಡ್ಲು ಹೋಬಳಿ ಲಕ್ಕಪ್ಪನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

15 ವರ್ಷದ ಲಕ್ಷ್ಮಿದೇವಿಯನ್ನು ಅದೇ ಗ್ರಾಮದ ಲಕ್ಷ್ಮಿನಾರಾಯಣ(20) ಪ್ರೀತಿಸಿದ್ದು, ಇದರಿಂದ ಆಕ್ರೋಶಗೊಂಡ ಲಕ್ಷ್ಮಿದೇವಿಯ ತಂದೆ ಚಿಕ್ಕನರಸಿಂಹಯ್ಯ ಮಗಳನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದಾನೆ.

ಲಕ್ಷ್ಮಿದೇವಿ ಮತ್ತು ಲಕ್ಷ್ಮಿನಾರಾಯಣ ಅನ್ಯ ಜಾತಿಯವರಾಗಿದ್ದು, ಇವರಿಬ್ಬರ ನಡುವೆ ಪ್ರೀತಿ ಬೆಳೆದಿತ್ತು. ಮಗಳು ಬೇರೆ ಯುವಕನೊಂದಿಗೆ ಹೆಚ್ಚಾಗಿ ಮಾತನಾಡುವುದನ್ನು ತಿಳಿದ ಚಿಕ್ಕನರಸಿಂಹಯ್ಯ ಬುದ್ಧಿವಾದ ಹೇಳಿ, ಯುವಕನಿಗೆ ಎಚ್ಚರಿಕೆ ನೀಡಿದ್ದಾರೆ.

ಆದರೂ ಲಕ್ಷ್ಮಿದೇವಿ ಮತ್ತು ಲಕ್ಷ್ಮಿ ನಾರಾಯಣ ಅವರ ನಡುವೆ ಪ್ರೀತಿ ಮುಂದುವರೆದು ಮನೆ ಬಿಟ್ಟು ಹೋಗಿದ್ದಾರೆ. ಇದರಿಂದ ಕೆರಳಿದ ಚಿಕ್ಕನರಸಿಂಹಯ್ಯ ಮಗಳನ್ನು ಮನೆಗೆ ಕರೆದುಕೊಂಡು ಬಂದು ದೊಣ್ಣೆಯಿಂದ ಹೊಡೆದಿದ್ದು, ಆಕೆ ಸಾವನ್ನಪ್ಪಿದ್ದಾಳೆ. ನಂತದ ಮನೆ ಸಮೀಪದ ಜಮೀನಿನಲ್ಲಿ ಮಗಳ ಶವ ಸುಟ್ಟುಹಾಕಿದ್ದಾರೆ.

1 ತಿಂಗಳ ನಂತರ ಈ ವಿಚಾರ ಪೊಲೀಸರ ಗಮನಕ್ಕೆ ಬಂದು ತನಿಖೆ ನಡೆಸಿದಾಗ ಅನ್ಯಜಾತಿಯ ಯುವಕನನ್ನು ಪ್ರೀತಿಸಿದ ಕಾರಣಕ್ಕೆ ತಂದೆಯೇ ಮಗಳನ್ನು ಕೊಲೆ ಮಾಡಿರುವುದು ಗೊತ್ತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...