alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ, ವಿಡಿಯೋ ಹರಿಬಿಟ್ಟು ಕೈಕೊಟ್ಟ

ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿದ ಕಾಂಗ್ರೆಸ್ ಮುಖಂಡ, ಬಳಿಕ ಕೈಕೊಟ್ಟ ಆರೋಪ ಕೇಳಿ ಬಂದಿದ್ದು, ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದಾರೆ.

ಬಂಟ್ವಾಳದ ಕಾಂಗ್ರೆಸ್ ಮುಖಂಡನಾಗಿರುವ ಯುವಕ ನಾಟಕ ತಂಡವನ್ನು ಹೊಂದಿದ್ದು, ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸದಲ್ಲಿದ್ದ ಯುವತಿಗೆ ಪಾತ್ರ ಕೊಡಿಸಿದ್ದಾನೆ. ಬಳಿಕ ಬೇರೆ ನಾಟಕಗಳಲ್ಲಿ ಪಾತ್ರ ಕೊಡಿಸುವುದಾಗಿ ಹೇಳಿ ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿದ್ದಾನೆ.

ನಂತರದಲ್ಲಿ ಯುವತಿಯೊಂದಿಗೆ ದೈಹಿಕ ಸಂಬಂಧ ಬೆಳೆಸಿ, ಅಶ್ಲೀಲ ದೃಶ್ಯಗಳನ್ನು ಸೆರೆ ಹಿಡಿದುಕೊಂಡಿದ್ದಾನೆ. ಮದುವೆಯಾಗಲು ನಿರಾಕರಿಸಿದ್ದ ಆತ, ಬಹಳ ಒತ್ತಾಯ ಮಾಡಿದ ಬಳಿಕ ಮದುವೆಯಾಗುವುದಾಗಿ ಒಪ್ಪಿದ್ದು, ಯುವತಿಯ ಅಶ್ಲೀಲ ವಿಡಿಯೋಗಳನ್ನು ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ ಎನ್ನಲಾಗಿದೆ.

ನೊಂದ ಯುವತಿ ಬಂಟ್ವಾಳ ಠಾಣೆ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾದ ಬಳಿಕ ವಂಚಿಸಿದ ಯುವಕ ಮತ್ತು ಆತನಿಗೆ ಬೆಂಬಲ ನೀಡಿದ್ದ ಕೆಲವು ಮುಖಂಡರು ನಾಪತ್ತೆಯಾಗಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...