alex Certify
ಕನ್ನಡ ದುನಿಯಾ       Mobile App
       

Kannada Duniya

ಟೆಕ್ಕಿ -ಆಟೋ ಚಾಲಕನ ಮದುವೆ, ಲವ್ ಜಿಹಾದ್ ಹೈಡ್ರಾಮ

ತುಮಕೂರು: ಸಾಫ್ಟ್ ವೇರ್ ಇಂಜಿನಯರ್ ಆಗಿದ್ದ ಯುವತಿ, ಅನ್ಯ ಕೋಮಿಗೆ ಸೇರಿದ ಆಟೋ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದು, ಇದಕ್ಕೆ ಲವ್ ಜಿಹಾದ್ ಬಣ್ಣ ಕಟ್ಟಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ರಾತ್ರಿ ತುಮಕೂರು ಗ್ರಾಮಾಂತರ ಠಾಣೆಯ ಎದುರು ಹೈಡ್ರಾಮ ನಡೆದಿದೆ.

ಜೈನ ಸಮುದಾಯಕ್ಕೆ ಸೇರಿದ ಯುವತಿ ಹಾಗೂ ಆಟೋ ಚಾಲಕನಾಗಿರುವ ಮುಸ್ಲಿಂ ಯುವಕನ ನಡುವೆ ಗೆಳೆತನವಾಗಿ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದಾರೆ. ಯುವತಿ ಮತಾಂತರವಾಗಿಲ್ಲ, ಮದುವೆಯ ಬಳಿಕ ಇಬ್ಬರೂ ಅನ್ಯೋನ್ಯವಾಗಿದ್ದಾರೆ.

ಇದು ಲವ್ ಜಿಹಾದ್ ಎಂದು ಆರೋಪಿಸಿ ಯುವತಿಯ ತಂದೆ ಸೇರಿ ಕೆಲವರು ಠಾಣೆಗೆ ಆಗಮಿಸಿ ಹೈಡ್ರಾಮಾ ನಡೆಸಿದ್ದಾರೆ. ಆಟೋ ಚಾಲಕ ತನ್ನ ತಂಗಿಯ ಸಹಾಯದಿಂದ ಯುವತಿಯನ್ನು ಮರಳು ಮಾಡಿ ಮದುವೆಯಾಗಿದ್ದಾನೆ. ಇದು ಲವ್ ಜಿಹಾದ್ ಆಗಿದೆ ಎಂದು ಗಲಾಟೆ ಮಾಡಿದ್ದಾರೆ.

ಪೊಲೀಸರು ಯುವತಿ ಹಾಗೂ ಯುವಕನನ್ನು ಠಾಣೆಗೆ ಕರೆಸಿ ವಿಚಾರಿಸಿದಾಗ, 7 ವರ್ಷಗಳಿಂದ ಯುವಕನನ್ನು ಪ್ರೀತಿಸಿದ್ದು, ಮದುವೆಯಾಗಿದ್ದೇನೆ. ಆತನೊಂದಿಗೆ ಇರುತ್ತೇನೆ ಎಂದು ಯುವತಿ ತಿಳಿಸಿದ್ದಾಳೆ. ಕೊನೆಗೆ ಪೊಲೀಸರು ಎಲ್ಲರನ್ನೂ ಸಮಾಧಾನಪಡಿಸಿ ಅಲ್ಲಿಂದ ಕಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...