alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಕರನ ಕಣ್ಣೆದುರಲ್ಲೇ ನಡೆಯಿತು ದುರಂತ

suicide-by-jumping-off-from-building

ಬೆಂಗಳೂರು: ಪ್ರೇಮಿಗಳ ನಡುವೆ ಜಗಳ ಸಾಮಾನ್ಯವಾದರೂ ಅದು ಕೆಲವೊಮ್ಮೆ ವಿಕೋಪಕ್ಕೆ ತಿರುಗಿ ಏನೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಪ್ರಿಯಕರನ ಮಾತಿನಿಂದ ಮನನೊಂದ ಯುವತಿ ಕಟ್ಟಡದಿಂದ ಹಾರಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬೆಂಗಳೂರು ಚಿನ್ನಪ್ಪನಹಳ್ಳಿಯ 20 ವರ್ಷದ ಯುವತಿ 5 ಅಂತಸ್ತಿನ ಕಟ್ಟಡದ ಮೇಲಿನಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿ.ಆರ್.ಡಿ.ಒ. ಕಾಲೋನಿಯಲ್ಲಿ ವಾಸವಾಗಿರುವ 21 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದ ಯುವತಿ ಅವನನ್ನೇ ಮದುವೆಯಾಗಲು ನಿಶ್ಚಯಿಸಿದ್ದಳು. ಯುವತಿ ಇಂಜಿನಿಯರಿಂಗ್ ಓದುತ್ತಿದ್ದು, ಯುವಕ ಬಿಕಾಂ ವಿದ್ಯಾರ್ಥಿಯಾಗಿದ್ದ. ಇಬ್ಬರಿಗೂ ಪರಿಚಯವಾಗಿದ್ದು, ಪರಿಚಯ ಸ್ನೇಹಕ್ಕೆ ನಂತರ ಪ್ರೀತಿಗೆ ತಿರುಗಿತ್ತು.

ಇಬ್ಬರೂ ಮದುವೆಯಾಗಲು ನಿಶ್ಚಯಿಸಿದ್ದರು. ಆದರೆ, ಕೆಲವು ದಿನಗಳಿಂದ ಯುವಕ ಆಕೆಯನ್ನ ಕಡೆಗಣಿಸುತ್ತಿದ್ದ ಎನ್ನಲಾಗಿದ್ದು, ಆತನ ಮನೆಗೆ ಬಂದ ಯುವತಿ ಕಾರಣ ಕೇಳಿದ್ದಾಳೆ. ನೀನು ನನಗೆ ಇಷ್ಟವಿಲ್ಲ ಎಂದು ಯುವಕ ಹೇಳಿದ್ದರಿಂದ ಮನನೊಂದು ಅವರ ಮನೆ ಇದ್ದ ಕಟ್ಟಡದ 5ನೇ ಮಹಡಿಯಿಂದ ಹಾರಿ ಸಾವು ಕಂಡಿದ್ದಾರೆ. ಮಹದೇವಪುರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡು ಮುಂದಿನಕ್ರಮ ಜರುಗಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...