alex Certify
ಕನ್ನಡ ದುನಿಯಾ       Mobile App
       

Kannada Duniya

ಕೈಕೊಟ್ಟ ಯುವಕನಿಗೆ ರೇಜರ್ ನಿಂದ ಇರಿದ ವಿದ್ಯಾರ್ಥಿನಿ

IMG-20160428-WA0000

ತೀರ್ಥಹಳ್ಳಿ: ಪ್ರೀತಿಸಿ ನಂತರ ಮದುವೆಯಾಗಲು ನಿರಾಕರಿಸಿದ ಪ್ರಿಯಕರನಿಗೆ ಯುವತಿಯೇ ರೇಜರ್ ನಿಂದ ಇರಿದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಶಮಂತ್ ಇರಿತಕ್ಕೊಳಗಾದ ಪ್ರಿಯಕರ. ಗಂಭೀರವಾಗಿ ಗಾಯಗೊಂಡಿರುವ ಆತನನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಸೇರಿಸಲಾಗಿದೆ.

ಮದುವೆಗೆ ನಿರಾಕರಿಸಿದ ಹಿನ್ನಲೆಯಲ್ಲಿ ಶಮಂತ್ ಗೆ ಮೇಘನಾ ಶೆಟ್ಟಿ ಎಂಬ ಯುವತಿ ರೇಜರ್ ನಿಂದ ಮುಖಕ್ಕೆ ಇರಿದು ಪರಾರಿಯಾಗಿದ್ದಾಳೆ. ಇಬ್ಬರೂ ತೀರ್ಥಹಳ್ಳಿಯವರೇ ಆಗಿದ್ದು, ಶಮಂತ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೇಘನಾ ಶೆಟ್ಟಿ ಬಿಬಿಎಂ ವಿದ್ಯಾರ್ಥಿನಿಯಾಗಿದ್ದು, ಇವರಿಬ್ಬರು ಪ್ರೀತಿಸುತ್ತಿದ್ದರೆನ್ನಲಾಗಿದೆ. ಮೊದಲಿಗೆ ಮೇಘನಾ ಶೆಟ್ಟಿ ಜೊತೆ ಪ್ರೀತಿಸುವ ನಾಟಕವಾಡಿದ ಶಮಂತ್ ಆಕೆಯೊಂದಿಗೆ ಸುತ್ತಾಟ ನಡೆಸಿದ್ದಾನೆ.

ಆತನ ಮನೆಯವರು ಒಪ್ಪದ ಕಾರಣ ಮದುವೆಯಾಗಲು ನಿರಾಕರಿಸಿ, ಆಕೆಯಿಂದ ದೂರವಾಗಲು ಪ್ರಯತ್ನಿಸಿದ್ದಾನೆ. ಎರಡು ದಿನಗಳ ಹಿಂದೆ ಮೇಘನಾ ಶೆಟ್ಟಿ ಮದುವೆಯಾಗುವಂತೆ ಕೇಳಿಕೊಂಡಾಗ ರಸ್ತೆಯಲ್ಲೇ ಆಕೆಗೆ ಕಪಾಳಕ್ಕೆ ಬಾರಿಸಿದ್ದ ಎಂದು ಹೇಳಲಾಗಿದೆ. ಇದರಿಂದ ಆಕ್ರೋಶಗೊಂಡ ಮೇಘನಾ ಶೆಟ್ಟಿ ಇಂದು ಬೆಳಿಗ್ಗೆ ಮುಖ್ಯ ಬಸ್ ನಿಲ್ದಾಣ ಬಳಿ ನಿಂತಿದ್ದ ಶಮಂತ್ ಮುಖಕ್ಕೆ ರೇಜರ್ ನಿಂದ ಇರಿದಿದ್ದಾಳೆ. ಕೂಡಲೇ ಆತನನ್ನು ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಗೆ ಸೇರಿಸಲಾಗಿದೆ. 13 ಹೊಲಿಗೆ ಹಾಕಲಾಗಿದೆ. ಈ ಸಂಬಂಧ ತೀರ್ಥಹಳ್ಳಿ ಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...