alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಸ್ಥಾನದಲ್ಲಿ ಕೇರಳ ಮೂಲದ ಬೈಕರ್‌ ಸಾವು

ಮೋಟಾರ್‌ ಬೈಕ್‌ ಸಾಹಸಿ ಕ್ರೀಡಾಪಟು, ಕೇರಳ ಮೂಲದ ಅಸ್ಬಾಕ್ ಮೊನ್(34) ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ರಾಜಸ್ಥಾನದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಅಸ್ಬಾಕ್, ಇಂಡಿಯಾ ಬಜಾಜ್‌-ಆಫ್‌ ರೋಡ್‌ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು, ಜೈಸಲ್ಮೆರ್‌ನಿಂದ 200 ಕಿ.ಮೀ. ದೂರದಲ್ಲಿರುವ ರಸ್ತೆಯಲ್ಲಿ ಅವರು ಬಿದ್ದಿದ್ದರು.

ಈ ವೇಳೆ ಅವರ ನೀರಿನ ಬಾಟಲ್ ಖಾಲಿಯಾಗಿತ್ತು. ಮರಣೋತ್ತರ ಪರೀಕ್ಷೆಯಲ್ಲಿ ದೇಹದಲ್ಲಿ ನೀರಿನಾಂಶ ಕಡಿಮೆಯಾಗಿ ಮೃತಪಟ್ಟಿರುವುದು ಗೊತ್ತಾಗಿದೆ. ಅಸ್ಬಾಕ್ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬೆಂಗಳೂರಿನಿಂದ ರಾಜಸ್ಥಾನಕ್ಕೆ ತೆರಳಿದ್ದ ಅಸ್ಬಾಕ್, ಗುರುವಾರ ನಗರದಲ್ಲಿ ಸುತ್ತಾಡಿದ್ದಾರೆ. ಬೆಳಿಗ್ಗೆ ಹೋದವರು ವಾಪಾಸ್‌ ಬರದೇ ಇದ್ದಾಗ, ಜೊತೆಗಾರರು ಪೊಲೀಸರ ಸಹಾಯದೊಂದಿಗೆ ಹುಡುಕಾಡಿದ್ದಾರೆ. ಬಳಿಕ ಅವರ ಮೃತ ದೇಹ ಪತ್ತೆಯಾಗಿದೆ. ಶನಿವಾರ ರ‍್ಯಾಲಿ ಏರ್ಪಡಿಸಲಾಗಿತ್ತೆಂದು ಹೇಳಲಾಗಿದ್ದು, ಅಸ್ಬಾಕ್ ಅವರ ಸಾವಿನ ಸಂಬಂಧ ಸಂಶಯಾಸ್ಪದ ಪ್ರಕರಣ ದಾಖಲಿಸಿರುವ ಪೊಲೀಸರು, ರ‍್ಯಾಲಿ ಆಯೋಜಕರು, ಕುಟುಂಬ ಸದಸ್ಯರ ವಿಚಾರಣೆ ನಡೆಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...