alex Certify
ಕನ್ನಡ ದುನಿಯಾ       Mobile App
       

Kannada Duniya

ನದಿಯಲ್ಲಿ ಕೊಚ್ಚಿಹೋದ ಲಾರಿ: ಇಬ್ಬರು ನೀರುಪಾಲು

ನದಿ ನೀರಿನಲ್ಲಿ ಲಾರಿ ಕೊಚ್ಚಿ ಹೋದ ಪರಿಣಾಮ ಇಬ್ಬರು ನೀರು ಪಾಲಾಗಿರುವ ಘಟನೆ ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿ ನಡೆದಿದೆ.

ಹಾವೇರಿ ಯಿಂದ ಹಾನಗಲ್ ಗೆ ಲಾರಿ ತೆರಳುತ್ತಿದ್ದ ವೇಳೆ ನಾಗನೂರು ಗ್ರಾಮದ ವರದಾ ನದಿ ಸೇತುವೆ ಮೇಲೆ ಈ ದುರ್ಘಟನೆ ನಡೆದಿದ್ದು, ಬಸವರಾಜ ಸೋಮಣ್ಣವರ ಹಾಗೂ ಲಕ್ಷ್ಮಣ ದೊಡ್ಡ ತಳವಾರ ನೀರು ಪಾಲಾಗಿದ್ದಾರೆ.

ಲಾರಿಯಲ್ಲಿದ್ದ ಗುಡ್ಡಪ್ಪ ಸೋಮಣ್ಣವರ ಎಂಬಾತ ಪಾರಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಹಾವೇರಿ ಗ್ರಾಮಾಂತರ ಠಾಣೆ ಪೊಲೀಸರು ನೀರು ಪಾಲಾದವರ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...