alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ರೈಲು ನಿಲ್ದಾಣದಲ್ಲಿ ಹಾರಾಡಲಿದೆ 100 ಅಡಿ ಎತ್ತರದ ತ್ರಿವರ್ಣ ಧ್ವಜ…!

ರಾಷ್ಟ್ರೀಯ ಸೇನಾ ಸ್ಮಾರಕ ಆಯ್ತು, ಇನ್ನು ಬೆಂಗಳೂರಿನ ಎರಡು ಪ್ರಮುಖ ರೈಲ್ವೆ ನಿಲ್ದಾಣದಲ್ಲೂ ಈ ವರ್ಷಾಂತ್ಯದೊಳಗೆ ಬೃಹತ್ ರಾಷ್ಟ್ರಧ್ವಜ ಹಾರಾಡಲಿದೆ.

ಹೌದು, ದೇಶದ ಪಾಲಿಗೆ ಹೆಮ್ಮೆಯಾಗಿರುವ ರಾಷ್ಟ್ರೀಯತೆಯ ಸಂಕೇತಗಳನ್ನು ಸಾರ್ವಜನಿಕವಾಗಿ ಬಿಂಬಿಸುವ ಪ್ರಧಾನಿ ಮೋದಿ ಸರ್ಕಾರದ ನೀತಿಯ ಭಾಗವಾಗಿ ಈ ರಾಷ್ಟ್ರಧ್ವಜಗಳನ್ನು ಅಳವಡಿಸಲಾಗುತ್ತದೆ.

ದೇಶದಲ್ಲಿ ಒಟ್ಟಾರೆ 75 ರೈಲ್ವೆ ನಿಲ್ದಾಣಗಳಲ್ಲಿ ಈ ರೀತಿ ರಾಷ್ಟ್ರ ಧ್ವಜಗಳನ್ನು ಅಳವಡಿಸುವ ಗುರಿ ಸರ್ಕಾರಕ್ಕಿದೆ. ವಾರ್ಷಿಕ 50 ಕೋಟಿಗಿಂತ ಹೆಚ್ಚು ಆದಾಯವಿರುವ ಅಂದರೆ ಎ ದರ್ಜೆಯ ರೈಲ್ವೆ ನಿಲ್ದಾಣಗಳಲ್ಲಿ ರಾಷ್ಟ್ರ ಧ್ವಜ ಅಳವಡಿಕೆಗೆ ಆಯ್ಕೆಯಾಗಿದೆ.

ಇದರಲ್ಲಿ ಬೆಂಗಳೂರಿನ ಯಶವಂತಪುರ ಹಾಗೂ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಗಳೂ ಸೇರಿವೆ. ನೂರು ಅಡಿ ಎತ್ತರದ ಈ ರಾಷ್ಟ್ರಧ್ವಜವನ್ನು ನಿಲ್ದಾಣದ ಪ್ರವೇಶ ಮತ್ತು ನಿರ್ಗಮನ ದ್ವಾರದ ಸಮೀಪ ಸ್ಥಾಪಿಸಲಾಗುತ್ತದೆ. ಇದಕ್ಕೆ ಸುಮಾರು 9 ಲಕ್ಷ ರೂಪಾಯಿ ವೆಚ್ಚ ತಗುಲುವ ಅಂದಾಜಿದೆ. ರೈಲ್ವೆ ಸುರಕ್ಷಾ ಪಡೆಯೇ ಈ ಧ್ವಜದ ಕಾವಲು ಕಾಯಲಿದೆ ಎಂದು ರೈಲ್ವೆ ಇಲಾಖೆಯ ಸುತ್ತೋಲೆ ಹೇಳಿದೆ. ಇನ್ನು ಮುಂದೆ ಬೆಂಗಳೂರಿನ ರೈಲ್ವೆ ಪ್ರಯಾಣಿಕರು ತಲೆಯೆತ್ತಿ ತ್ರಿವರ್ಣ ಧ್ವಜಕ್ಕೊಂದು ಗೌರವ ಸಲ್ಲಿಸಿ ನಿಲ್ದಾಣ ಪ್ರವೇಶಿಸಬಹುದು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...