alex Certify
ಕನ್ನಡ ದುನಿಯಾ       Mobile App
       

Kannada Duniya

ಲೋಕಾಯುಕ್ತ ನ್ಯಾ. ವಿಶ್ವನಾಥ್ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ್ ಶೆಟ್ಟಿ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ವಿಶ್ವನಾಥ್ ಶೆಟ್ಟಿ ಐಸಿಯುವಿನಲ್ಲಿಯೇ ವಾಕಿಂಗ್ ಮಾಡಿದ್ದಾರೆಂದು ಮಗ ಶಶಿಕಿರಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾಳೆ ವಾರ್ಡ್ ಗೆ ವಿಶ್ವನಾಥ್ ಶೆಟ್ಟಿ ಶಿಫ್ಟ್ ಆಗಲಿದ್ದಾರೆ ಎನ್ನಲಾಗಿದೆ.

ವಿಶ್ವನಾಥ್ ಶೆಟ್ಟಿಗೆ ಒಂದಲ್ಲ ಎರಡಲ್ಲ 7 ಬಾರಿ ಆರೋಪಿ ತೇಜ್ ರಾಜ್ ಚಾಕು ತಿವಿದಿದ್ದಾನೆ ಎಂಬ ವಿಷ್ಯ ಬಹಿರಂಗವಾಗಿದೆ. ಹೊಟ್ಟೆ, ಎದೆ, ಹಣೆ, ಕಾಲು ಸೇರಿ  7 ಕಡೆ ತೇಜ್ ರಾಜ್ ಚಾಕು ಇರಿದಿದ್ದಾನೆ. ಸದ್ಯ ವಿಶ್ವನಾಥ್ ಶೆಟ್ಟಿ ಮಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದ್ರವ ರೂಪದ ಆಹಾರ ಸೇವನೆ ಮಾಡ್ತಿದ್ದಾರೆ.

ಮಾರ್ಚ್ 7ರಂದು ಘಟನೆ ನಡೆದಿತ್ತು. ಲೋಕಾಯುಕ್ತ ಕಚೇರಿಗೆ ಬಂದಿದ್ದ ತೇಜರಾಜ್ ವಿಶ್ವನಾಥ್ ಶೆಟ್ಟಿಯವರಿಗೆ ಚಾಕು ಇರಿದಿದ್ದ. ಪ್ರಕರಣ ನಡೆದ ತಕ್ಷಣ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...