alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿದೆ ಆಸ್ತಿ ವಿವರ ಸಲ್ಲಿಸದ ಪ್ರಮುಖ ಶಾಸಕರ ಪಟ್ಟಿ

ವಿಧಾನಸಭೆ ಹಾಗೂ ವಿಧಾನ ಪರಿಷತ್ ಸದಸ್ಯರು ಪ್ರತಿ ವರ್ಷ ಜೂನ್ 30ರ ಒಳಗೆ ಕಡ್ಡಾಯವಾಗಿ ತಮ್ಮ ಆಸ್ತಿ ವಿವರವನ್ನು ಲೋಕಾಯುಕ್ತಕ್ಕೆ ಸಲ್ಲಿಸಬೇಕಿದ್ದು, ಆದರೆ ಅವಧಿ ಮೀರಿದರೂ ಸಚಿವರು ಸೇರಿದಂತೆ ಒಟ್ಟು 92 ಶಾಸಕರುಗಳು ತಮ್ಮ ಆಸ್ತಿ ವಿವರ ಸಲ್ಲಿಸದಿರುವುದು ಬೆಳಕಿಗೆ ಬಂದಿದೆ.

ಈ ಪಟ್ಟಿಯಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ, ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಅವರುಗಳೂ ಒಳಗೊಂಡಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರು ಮೂರು ದಿನಗಳ ಹಿಂದಷ್ಟೇ ತಮ್ಮ ಆಸ್ತಿ ವಿವರ ಸಲ್ಲಿಸಿದ್ದಾರೆ ಎಂದು ತಿಳಿದು ಬಂದಿದೆ.

ಆಸ್ತಿ ವಿವರ ಸಲ್ಲಿಸದ ಸಚಿವರ ಪಟ್ಟಿಯಲ್ಲಿ ಎಂ.ಸಿ. ಮನಗೂಳಿ, ಬಂಡೆಪ್ಪ ಕಾಶೆಂಪುರ, ವೆಂಕಟರಮಣಪ್ಪ, ಜಮೀರ್ ಅಹಮದ್ ಖಾನ್, ಡಿ.ಸಿ. ತಮ್ಮಣ್ಣ, ಸಿ.ಎಸ್. ಪುಟ್ಟರಾಜು ಹಾಗೂ ಎನ್. ಮಹೇಶ್ ಒಳಗೊಂಡಿದ್ದಾರೆ.

ಶಾಸಕರುಗಳ ಪೈಕಿ ಜೆ.ಕೆ. ಕೃಷ್ಣಾರೆಡ್ಡಿ, ಅಂಜಲಿ ನಿಂಬಾಳ್ಕರ್, ಅರವಿಂದ ಬೆಲ್ಲದ್, ಪಿ.ಟಿ. ಪರಮೇಶ್ವರ ನಾಯ್ಕ, ಬಿ. ಶ್ರೀರಾಮುಲು, ಗೂಳಿಹಟ್ಟಿ ಶೇಖರ್, ಎಸ್.ಟಿ. ಸೋಮಶೇಖರ್, ರೂಪಕಲಾ ಶಶಿಧರ್, ರೇಣುಕಾಚಾರ್ಯ, ಎಂ.ಟಿ.ಬಿ ನಾಗರಾಜ್, ಉದಯ ಗರುಡಾಚಾರ್, ಭರತ್ ಶೆಟ್ಟಿ, ಎಚ್. ವಿಶ್ವನಾಥ್ ಪ್ರಮುಖರಾಗಿದ್ದಾರೆ.

ಇನ್ನು ವಿಧಾನ ಪರಿಷತ್ ಸದಸ್ಯರ ಪೈಕಿ ಸಿ.ಎಂ. ಇಬ್ರಾಹಿಂ, ಪಿ.ಆರ್. ರಮೇಶ್, ತೇಜಸ್ವಿನಿ ಗೌಡ, ರಿಜ್ವಾನ್ ಅರ್ಷದ್, ಟಿ.ಎ. ಶರವಣ, ಕೆ.ಟಿ. ಶ್ರೀಕಂಠೇಗೌಡ, ಕೆ.ಪಿ. ನಂಜುಂಡಿ, ರವಿಕುಮಾರ್, ಬಿ.ಎಂ. ಫಾರೂಕ್, ಪ್ರದೀಪ್ ಶೆಟ್ಟರ್, ಅಲ್ಲಂ ವೀರಭದ್ರಪ್ಪ ಹಾಗೂ ಆರ್.ಬಿ. ತಿಮ್ಮಾಪುರ ಆಸ್ತಿ ವಿವರ ಸಲ್ಲಿಸದ ಪ್ರಮುಖರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...