alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿ ಹಾಗೂ ಮಾಜಿ ಕಾರ್ಪೊರೇಟರ್ ಗುಂಪಿನ ನಡುವೆ ಮಾರಾಮಾರಿ

ಬೆಳಗಾವಿ: ಮಾಜಿ ಹಾಗೂ ಹಾಲಿ ಕಾರ್ಪೊರೇಟರ್ ಗಳ ಗುಂಪಿನ ನಡುವೆ ನಡೆದ ಘರ್ಷಣೆ ಹಾಗೂ ಮಾರಾಮಾರಿಯಲ್ಲಿ ಪಾಲಿಕೆ ಮಾಜಿ ಸದಸ್ಯನಿಗೆ ಚಾಕುವಿನಿಂದ ಇರಿದ ಘಟನೆ ಬೆಳಗಾವಿಯ ಉಜ್ವಲ್ ನಗರದಲ್ಲಿ ನಡೆದಿದೆ.

ಹಳೆ ವೈಷಮ್ಯದ ಹಿನ್ನಲೆಯಲ್ಲಿ ತಡ ರಾತ್ರಿ ಎರಡು ಗುಂಪುಗಳ ನಡುವೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಎರಡೂ ಗುಂಪಿನ ಮುಖಂಡರಾದ ಮಾಜಿ ಕಾರ್ಪೊರೇಟರ್​ ಫಿರ್ದೋಸ್​ ದರ್ಗಾ ಹಾಗೂ ಕಾರ್ಪೊರೇಟರ್ ಮತೀನ್‌ ಅಲಿ ನಡುವೆ ಕಾದಾಟ ಆರಂಭವಾಗಿದೆ. ಈ ವೇಳೆ ಮಾಜಿ ಕಾರ್ಪೊರೇಟರ್​ ಫಿರ್ದೋಸ್​ ದರ್ಗಾ ಬೆನ್ನಿಗೆ ಚಾಕುವಿನಿಂದ ಇರಿಯಲಾಗಿದ್ದು, ಗಂಭೀರವಾಗಿ ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಂಘರ್ಷದಲ್ಲಿ ಮತಿನ್ ಅಲಿ ಅವರಿಗೂ ಗಾಯಗಳಾಗಿದ್ದು, ಅವರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಾಳಮಾರುತಿ‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...