alex Certify
ಕನ್ನಡ ದುನಿಯಾ       Mobile App
       

Kannada Duniya

ಯುವತಿ ಮೇಲೆ ಹಲ್ಲಿ ಎಸೆದಿದ್ದ ಕಿಡಿಗೇಡಿ ಅರೆಸ್ಟ್

arest-hali

ಬೆಂಗಳೂರು: ಪ್ಲಾಸ್ಟಿಕ್ ಹಲ್ಲಿಯನ್ನು ಎಸೆದು ಯುವತಿಗೆ ಲೈಂಗಿಕ ಕಿರುಕುಳ ನೀಡಿದ್ದ ಆರೋಪಿಯನ್ನು ಇಂದಿರಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಹೆಚ್.ಎ.ಎಲ್.ನ ಎಲ್.ಬಿ.ನಗರದ ಮುರಳಿ(35) ಬಂಧಿತ ಆರೋಪಿ. ಜೂನ್ 16 ರಂದು ಇಂದಿರಾನಗರದ ಸಿ.ಎಂ.ಹೆಚ್. ರಸ್ತೆಯಲ್ಲಿ ಬಿಹಾರದ ಯುವತಿ ಮೇಲೆ ಪ್ಲಾಸ್ಟಿಕ್ ಹಲ್ಲಿ ಎಸೆದಿದ್ದ.

ಯುವತಿ ಗಾಬರಿಯಾದಾಗ ಹಲ್ಲಿ ತೆಗೆಯುವ ನೆಪದಲ್ಲಿ ದೇಹವನ್ನು ಸ್ಪರ್ಶಿಸಿ ಕಿರುಕುಳ ನೀಡಿದ್ದನೆನ್ನಲಾಗಿದೆ. ಈ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿ.ಸಿ. ಟಿ.ವಿ. ದೃಶ್ಯಗಳನ್ನು ಆಧರಿಸಿ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಮೊದಲಿಗೆ ಯುವತಿ ಮೇಲೆ ಜೇನು ಹುಳ ಕುಳಿತಿದ್ದು ಎಂದು ವಿಚಾರಣೆಯಲ್ಲಿ ಹೇಳಿದ್ದ ಮುರಳಿ ಬಳಿಕ ಪ್ಲಾಸ್ಟಿಕ್ ಹಲ್ಲಿ ಎಸೆದಿದ್ದನ್ನು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...