alex Certify
ಕನ್ನಡ ದುನಿಯಾ       Mobile App
       

Kannada Duniya

ಎಂ.ಬಿ. ಪಾಟೀಲ್ –ಪ್ರಭಾಕರ್ ಕೋರೆ ಜಟಾಪಟಿ

ಬೆಂಗಳೂರು: ಪ್ರತ್ಯೇಕ ಧರ್ಮ ವಿಚಾರವಾಗಿ ಇಂದು ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ, ಸಚಿವ ಎಂ.ಬಿ. ಪಾಟೀಲ್ ಮತ್ತು ರಾಜ್ಯಸಭೆ ಸದಸ್ಯ ಪ್ರಭಾಕರ್ ಕೋರೆ ಅವರ ನಡುವೆ ವಾಗ್ವಾದ ನಡೆದಿದೆ.

ವೀರಶೈವ ಮತ್ತು ಲಿಂಗಾಯತ ನಾಯಕರು ಖಾಸಗಿ ಹೋಟೆಲ್ ನಲ್ಲಿ ಸಭೆ ಸೇರಿ ಚರ್ಚೆ ನಡೆಸಿದ್ದು, ಸಭೆಯ ಆರಂಭದಲ್ಲಿ ಎಸ್.ಎಂ. ಜಾಮದಾರ್ ಅವರು, ಲಿಂಗಾಯತ ಧರ್ಮದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಆಕ್ಷೇಪಿಸಿದ ಪ್ರಭಾಕರ್ ಕೋರೆ, ಹಿಂದಿನ ಶತಮಾನದ ವಿವರಣೆ ಬೇಡ. ಈಗ ನಾವೆಲ್ಲರೂ ಏನು ಮಾಡಬೇಕೆಂಬುದನ್ನು ಹೇಳಿ ಎಂದು ಸಲಹೆ ನೀಡಿದ್ದಾರೆ.

ಇದಕ್ಕೆ ಪಾಟೀಲರು ಸಿಟ್ಟಾಗಿ, ಏನೇ ತೀರ್ಮಾನವಿದ್ದರೂ, ಜನವರಿಯೊಳಗೆ ಎಲ್ಲವನ್ನೂ ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ. ಜನವರಿಯೊಳಗೆ ನಿರ್ಧಾರ ಕೈಗೊಂಡರೆ, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ, ಚುನಾವಣಾ ನೀತಿ ಸಂಹಿತೆ ಬರಬಹುದು ಎಂದು ಹೇಳಿದ್ದಾರೆ.

ಆಗ ಪ್ರಭಾಕರ್ ಕೋರೆ, ಜನವರಿಯೊಳಗೆ ಬಗೆಹರಿಸಲು ಚುನಾವಣೆ ರಾಜಕೀಯ ಕಾರಣವೇ ಎಂದು ಪ್ರಶ್ನಿಸಿದ್ದು, ಪ್ರತ್ಯೇಕ ಧರ್ಮದ ವಿಚಾರದಲ್ಲಿ ರಾಜಕೀಯ ಬೇಡ. ಈಗ ಆಗದಿದ್ದರೆ, ಮುಂದೆ ಬರುವವರು ಶಿಫಾರಸು ಮಾಡುತ್ತಾರೆ ಎಂದಿದ್ದಾರೆ.

ಇದರಲ್ಲಿ ಯಾರೂ ರಾಜಕೀಯ ಮಾಡಿಲ್ಲ ಎಂದು ಪಾಟೀಲರು ಹೇಳಿದ್ದು, ಇದೇ ವಿಚಾರಕ್ಕೆ ಇಬ್ಬರೂ ನಾಯಕರ ನಡುವೆ ಜಟಾಪಟಿ ನಡೆದಿದೆ. ಆಗ ಸಭೆಯಲ್ಲಿದ್ದ ನಾಯಕರು ಇಬ್ಬರನ್ನೂ ಸಮಾಧಾನಪಡಿಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...