alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಸಾಕೋದಿಕ್ಕೂ ಬೇಕಂತೆ ಲೈಸೆನ್ಸ್ !

1337094815

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿರುವ ಬಿಬಿಎಂಪಿ ಇದೀಗ ನಾಯಿ ಸಾಕುವವರು ಕಡ್ಡಾಯವಾಗಿ ಲೈಸೆನ್ಸ್ ಪಡೆಯಬೇಕು ಎಂಬ ಸೂಚನೆ ನೀಡಲು ಮುಂದಾಗಿದ್ದು, ಆ ಮೂಲಕ ನಾಯಿ ಸಾಕಿ ಬೀದಿಗೆ ಬಿಡುವವರಿಗೆ ಕಡಿವಾಣ ಬೀಳಲಿದೆ.

ಹೌದು. ಇತ್ತೀಚೆಗೆ ಬೆಂಗಳೂರಿನಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಹಲವೆಡೆ ಮಕ್ಕಳು ಹಾಗೂ ಮಹಿಳೆಯರ ಮೇಲೆ ದಾಳಿ ನಡೆಸಿದ ಘಟನೆಗಳೂ ನಡೆದಿವೆ. ಅಲ್ಲದೇ ಇಲ್ಲಿನ ಪುಟ್ ಪಾತ್, ಬೀದಿ ನಾಯಿಗಳಿಗೆ ‘ಆಶ್ರಯ ಮನೆ ಯೋಜನೆ’ಯಂತಾಗಿದ್ದು ಹಗಲೆಲ್ಲಾ ಪುಟ್ ಪಾತ್ ನಲ್ಲಿ ಮಲಗಿರುವ ಈ ಬೀದಿ ನಾಯಿಗಳು ಸಂಜೆಯಾಗುತ್ತಿದ್ದಂತೆ ಹಿಂಡುಹಿಂಡಾಗಿ ಓಡಾಡತೊಡಗುತ್ತವೆ.

ಅಷ್ಟೇ ಅಲ್ಲ, ವಾಹನ ಸವಾರರ ಮೇಲೆ, ಮಕ್ಕಳ ಮೇಲೆ ದಾಳಿ ನಡೆಸಿದ ಸಾಕಷ್ಟು ಘಟನೆಗಳೂ ನಡೆದಿದ್ದು, ಈ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮನೆಗಳಲ್ಲಿ ನಾಯಿಗಳನ್ನು ಸಾಕಲು ಬಿಬಿಎಂಪಿ ಯಿಂದ ಲೈಸೆನ್ಸ್ ಪಡೆಯುವುದು ಕಡ್ಡಾಯ ಮಾಡಲು ನಿರ್ಧರಿಸಲಾಗಿದೆ. ಲೈಸೆನ್ಸ್ ಗೂ ಮುಂಚಿತವಾಗಿ ನಾಯಿಗಳಿಗೆ ಆ್ಯಂಟಿ ರೇಬಿಸ್ ಚುಚ್ಚುಮದ್ದು ಹಾಕಿಸಿರಬೇಕು. ರೇಬಿಸ್ ಕಾಯಿಲೆಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಮನೆಗೊಂದೇ ನಾಯಿ ಅನ್ನೋ ರೂಲ್ಸ್ ಬಿಬಿಎಂಪಿ ವ್ಯಾಪ್ತಿಯಲ್ಲಿ ಸದ್ಯದಲ್ಲೇ ಚಾಲನೆಗೆ ಬರಲಿದ್ದು, ಅಪಾರ್ಟ್ಮೆಂಟ್ ಗಳಲ್ಲಿ ವಾಸಿಸುವ ನಾಗರೀಕರು ಒಂದು ನಾಯಿಯನ್ನು ಸಾಕಬಹುದಾಗಿದ್ದರೆ, ಮನೆಗಳಲ್ಲಿ ವಾಸಿಸುವ ನಾಗರೀಕರು ಮೂರು ನಾಯಿಗಳನ್ನು ಸಾಕಬಹುದಾಗಿದೆ ಎಂದು ಬಿಬಿಎಂಪಿ ಮಾಹಿತಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...