alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರೇಯಸಿಯೊಂದಿಗೆ ಮದುವೆಯಾಗಲು ದೇವರಿಗೆ ಮೊರೆ !

letter-writing 1

ಇಷ್ಟಾರ್ಥ ಸಿದ್ಧಿಗೆ ಕೆಲವರು ದೇವರ ಮೊರೆ ಹೋಗುತ್ತಾರೆ. ಪೂಜೆ, ಪ್ರಾರ್ಥನೆ, ಹರಕೆ ಸಲ್ಲಿಸಿ ಬೇಡಿಕೊಳ್ಳುತ್ತಾರೆ. ತಮ್ಮ ಮನದಲ್ಲಿನ ಬಯಕೆಯನ್ನು ಈಡೇರಿಸಿದರೆ, ಕಾಣಿಕೆ ಸಲ್ಲಿಸಿ, ಹರಕೆ ತೀರಿಸುವುದಾಗಿ ದೇವರಲ್ಲಿ ಬೇಡಿಕೊಳ್ಳುತ್ತಾರೆ.

ಅದೆಲ್ಲಾ ಮಾಮೂಲಿಯಾಯ್ತು. ಇಲ್ಲೊಬ್ಬ ಯುವಕ ದೇವರಿಗೇ ಪತ್ರ ಬರೆದು, ತನ್ನ ಪ್ರೇಯಸಿಯೊಂದಿಗೆ ಮದುವೆ ಮಾಡಿಸು ಹಾಗೂ ಸರ್ಕಾರಿ ಉದ್ಯೋಗವನ್ನು ಕೊಡಿಸು ಎಂದು ಬೇಡಿಕೆ ಸಲ್ಲಿಸಿದ್ದಾನೆ. ಈತ ತನ್ನ ಬೇಡಿಕೆಗಳೆಲ್ಲವನ್ನು ಪತ್ರದಲ್ಲಿ ಬರೆದು ದೇವರ ಕಾಣಿಕೆ ಹುಂಡಿಯಲ್ಲಿ ಹಾಕಿದ್ದಾನೆ. ಅಂದ ಹಾಗೇ ಘಟನೆ ನಡೆದಿರುವುದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಕನಕಗಿರಿಯಲ್ಲಿ. ಕನಕಗಿರಿಯಲ್ಲಿರುವ ಕನಕಾಚಲ ದೇವಾಲಯದಲ್ಲಿ ಕಾಣಿಕೆ ಹುಂಡಿಯಲ್ಲಿ ಈ ಪತ್ರ ಸಿಕ್ಕಿದೆ ಎನ್ನಲಾಗಿದೆ.

ದೇವರಿಗೆ ಪ್ರಾರ್ಥಿಸಿ ಪತ್ರ ಬರೆದಿರುವ ಯುವಕ ತನ್ನ ಪ್ರೇಯಸಿಯೊಂದಿಗೆ ಮದುವೆ ಮಾಡಿಸಿದರೆ, ಇಬ್ಬರೂ ಬಂದು ಅಭಿಷೇಕ ಮಾಡಿಸುತ್ತೇವೆ ಎಂದು ತಿಳಿಸಿದ್ದಾನೆ. ಸರ್ಕಾರಿ ಕೆಲಸ, ಮದುವೆ ಬಗ್ಗೆ ದೇವರಿಗೆ ಸಲ್ಲಿಸಿದ ಈತನ ಆಸೆ ಕೈಗೂಡಿತೋ, ಇಲ್ಲವೋ ಪತ್ರವಂತೂ ಬಹಿರಂಗವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...